ತುಮಕೂರು ವಿವಿ ಪ್ರಪ್ರಥಮ ಕುಲಪತಿ ಪ್ರೊ.ಓ.ಅನಂತರಾಮಯ್ಯ ನಿಧನ

Untitled-1
Published on

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಪ್ರಪ್ರಥಮ ಕುಲಪತಿ ಪ್ರೊ.ಓ.ಅನಂತರಾಮಯ್ಯ ಶನಿವಾರ ಸಂಜೆ ನಿಧನರಾದರು.

ಕೊರಟಗೆರೆ ಮೂಲದ ಪ್ರೊ.ಓ.ಅನಂತರಾಮಯ್ಯ ಅವರು ತುಮಕೂರು ವಿವಿ ಆರಂಭದ ದಿನಗಳಲ್ಲಿ ವಿವಿ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪತ್ನಿ, ಇಬ್ಬರು ಪತ್ರಿಯರು, ಒಬ್ಬ ಪುತ್ರನನ್ನು ಡಾ.ಓ.ಅನಂತರಾಮಯ್ಯ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಕೊರಟಗೆರೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net