

ತುಮಕೂರು: ರಾಜ್ಯದಲ್ಲಿ ಶಾಂತಿ ನೆಲೆಸಿದ್ದು ಮದ್ದೂರಿನಲ್ಲಿ ಶಾಂತಿ ಕದಡಲು ಯತ್ನಿಸಿದವರನ್ನು ಸುಮ್ಮನೆ ಬಿಡುವುದಿಲ್ಲ, ಹಿಂದೂ ಅಥವಾ ಮುಸ್ಲೀಂ ಯಾರಾದರೂ ಕ್ಷಮಿಸುವುದಿಲ್ಲ. ಈಗಾಗಲೇ 15 ಜನರನ್ನು ಬಂಧಿಸಲಾಗಿದ್ದು ಉಳಿದವರನ್ನು ಬಂಧಿಸುತ್ತೇವೆ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದ್ದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನಿಸಿದರೆ ಅಂತಹವರನ್ನು ಹುಡುಕಿ ಕ್ರಮಕೈಗೊಳ್ಳುತ್ತೇವೆ, ಭದ್ರತಾ ವೈಪಲ್ಯವಾಗಿದ್ದರೂ ಆನಂತರ ಪರಿಶೀಲಿಸೋಣ ಪೊಲೀಸರು ಕಲ್ಲು ಹೊಡೆಯಲು ಹೇಳಿಲ್ಲ, ಎಲ್ಲರೂ ಶಾಂತಿಯಿಂದ ಹೋಗಬೇಕು ಎಂಬುದು ನಮ್ಮ ಆಶಯ, ಹೊರಗಿನಿಂದಲೂ ಹೋಗಿ ಗಲಾಟೆಗೆ ಪ್ರಚೋದಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ಸಿಸಿ ಕ್ಯಾಮೆರಾ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸುಮ್ಮನೆ ಹೋಗಿ ಪ್ರಚೋದಿಸುವ ಕೆಲಸವನ್ನು ಮಾಡಿದರೆ ಸಹಿಸುವುದಿಲ್ಲ, ಈ ಪ್ರಕರಣದಲ್ಲಿ ಯಾವ ಸಮುದಾಯವನ್ನು ಸರ್ಕಾರ ಓಲೈಕೆ ಮಾಡಿಲ್ಲ ಸುಮ್ಮನೆ ವಿರೋಧ ಪಕ್ಷಗಳು ಹೇಳಲು ಮಾಡಿಕೊಂಡಿದ್ದಾರೆ ಎಂದರು.