

ತುಮಕೂರು: ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ತೀವ್ರ ಹೆರಿಗೆ ನೋವಿನಿಂದ ನರುಳುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯೆಯೇ ಹೆರಿಗೆ ಮಾಡಿಸುವ ಮೂಲಕ 108 ಸಿಬ್ಬಂದಿ ನೆರವಾಗಿದ್ದಾರೆ.
ತಿಪಟೂರು ತಾಲೂಕು ಹೊನ್ನವಳ್ಳಿ ಹೋಬಳಿಯ ಬಿ.ರಂಗಾಪುರ ಕಾಲೊನಿಯ ಭಾಗ್ಯಲಕ್ಷ್ಮೀ ಅವರಿಗೆ ಹೆಸರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು 108ಗೆ ಕರೆ ಮಾಡಿ ನೆರವು ಕೋರಿದ್ದರು. ಮಾರ್ಗಮಧ್ಯೆಯೇ ಆರೋಗ್ಯವಂತ ಗಂಡು ಮಗುವಿಗೆ ಭಾಗ್ಯಲಕ್ಷ್ಮೀ ಜನ್ಮ ನೀಡಿದ್ದಾರೆ.
108 ಆಂಬ್ಯುಲೆನ್ ಇಎಂಟಿ ಆಶಾ, ಪೈಲೆಟ್ ಚಿದಾನಂದ್ ಸುರಕ್ಷಿತ ಹೆರಿಗೆ ಮಾಡಿಸಿದ್ದು,
ತಾಯಿ ಮತ್ತು ಗಂಡು ಮಗುವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.