

ನವದೆಹಲಿ: ಮನೆಯಲ್ಲಿ ತುಳಸಿ ಗಿಡವಿದ್ದರೆ ಶುಭವೆಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ತನ್ನದೇ ಆದ ವಿಶೇಷ ಮಹತ್ವವಿದ್ದು, ಶಾಸ್ತ್ರಗಳಲ್ಲಿಯೂ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಆದರೆ ಇಂದು ತುಳಸಿ ಗಿಡಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹೊಸ ಮನೆ ನಿರ್ಮಿಸಿದಾಗ ಮನೆಯ ಮುಂದೊಂದು ತುಳಸಿ ಗಿಡದ ಕಟ್ಟೆ ನಿರ್ಮಿಸುವುದು ಅಗತ್ಯವಾಗಿದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಶುಭವೆಂದು ಹೇಳಲಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಗಿಡ ತಾನಾಗಿಯೇ ತಿರುಗುವುದನ್ನು ನೀವು ನೋಡಿದ್ದೀರಾ...? ಇಂತಹದೊಂದು ದೃಶ್ಯ ವೈರಲ್ ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋದಲ್ಲಿ ಏನಿದೆ?: ತುಳಸಿ ಗಿಡ ತಾನಾಗಿಯೇ ಗಿರಕಿ ಹೊಡೆಯುತ್ತಿದೆಯಂತೆ. ಎತ್ತರದ ಮರದ ಬುಡದಲ್ಲಿ ನೆಟ್ಟ ತುಳಸಿ ಗಿಡ ಚಲಿಸುತ್ತಿರುವಂತೆ ಕಾಣುತ್ತಿದೆ. ಇದನ್ನು ನೋಡಿದ ಮಹಿಳೆಯರು ಅಚ್ಚರಿಗೊಂಡು ವಿಡಿಯೋದಲ್ಲಿ ಕುತೂಹಲ ವ್ಯಕ್ತಪಡಿಸಿದ್ದಾರೆ. ತುಳಸಿ ಗಿಡ ತಾನಾಗಿಯೇ ತನ್ನ ಸುತ್ತ ತಾನೇ ತಿರುಗುತ್ತಿದೆ, ನೃತ್ಯ ಮಾಡುತ್ತಿದೆ ಎಂದು ಚರ್ಚಿಸುತ್ತಿದ್ದಾರೆ. ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ಎಲ್ಲಿ ಮತ್ತು ಯಾವಾಗ ರೆಕಾರ್ಡ್ ಆಗಿದೆ ಎಂಬುದು ತಿಳಿದಿಲ್ಲ. ಆದರೆ ಒಂದಂತೂ ನಿಜ. ಈ ವಿಡಿಯೋ ಹಿಂದಿನ ಸತ್ಯ ತಿಳಿದಿಲ್ಲ. ಆದರೆ ಈ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.