

ತಿರುಪತಿ: ತಿರುಮಲ ತಿಮ್ಮಪ್ಪನ ಆರ್ಜಿತ ಸೇವೆಗಳ ನವೆಂಬರ್ ತಿಂಗಳ ಟಿಕೆಟ್ ಸೋಮವಾರ ಬಿಡುಗಡೆಯಾಗಿದ್ದು, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್‌ಲೈನ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಬೈಕ್ ಖರೀದಿಸಿದ..ಬಳಿಕ ಏನಾಯ್ತು ನೋಡಿ!
ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯ ಮೂಲಕ ಈ ಟಿಕೆಟ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ಆಗಸ್ಟ್ 19 ರಂದು ಬೆಳಗ್ಗೆ 10 ರಿಂದ ಆಗಸ್ಟ್ 21 ರ ಬೆಳಿಗ್ಗೆ 10 ರವರೆಗೆ ಭಕ್ತರು ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಟಿಟಿಡಿ ಪ್ರಕಟಿಸಿದೆ.
ಆಗಸ್ಟ್ 21ರಂದು ಲಕ್ಕಿ ಡಿಪ್ ನಡೆಯಲಿದ್ದು, ಟಿಕೆಟ್ ಪಡೆದ ಭಕ್ತರು 23ರ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಬೇಕು. ಇದಲ್ಲದೆ, ಏಂಜಾಲ್ ಸೇವೆ, ಕಲ್ಯಾಣೋತ್ಸವಂ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳನ್ನು ಆಗಸ್ಟ್ 22 ರಂದು ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಪ್ರಕಟಿಸಿದೆ.
ಇವುಗಳ ಜೊತೆಗೆ ನವೆಂಬರ್ 9 ರಂದು ನಡೆಯಲಿರುವ ಪುಷ್ಪಯಾಗಂ ಸೇವೆಯ ಟಿಕೆಟ್ ಕೂಡ ಬಿಡುಗಡೆಯಾಗಲಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಕೋಟಾವನ್ನು ಬಿಡುಗಡೆ ಮಾಡಲಾಗುವುದು ಎಂದು ವರ್ಚುವಲ್ ಸೇವೆಗಳು ತಿಳಿಸಿವೆ.
ಇದಲ್ಲದೆ, ಅಂಗಪ್ರದಕ್ಷಿಣೆಗೆ ಸಂಬಂಧಿಸಿದಂತೆ, ಟಿಟಿಡಿ ನವೆಂಬರ್ ಕೋಟಾವನ್ನು ಆ.23 ರಂದು ಬೆಳಗ್ಗೆ 10 ಗಂಟೆಗೆ ಮತ್ತು ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಳನ್ನು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. ಇನ್ನು ಸ್ವಾಮಿಯ ದರ್ಶನಕ್ಕೆ ಬರುವ ವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಅನಾರೋಗ್ಯ ಪೀಡಿತರಿಗೆ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಉಚಿತ ವಿಶೇಷ ದರ್ಶನ ಟಿಕೆಟ್ ಲಭ್ಯವಾಗಲಿದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.