1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ

Tirupati
Published on

ತಿರುಪತಿ: ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ 126 ಆಸ್ತಿಗಳನ್ನು 1974ರಿಂದ ಹರಾಜು ಮಾಡಲಾಗಿದೆ. ಆಗಿಲ್ಲದ ವಿರೋಧ ಈಗ ಏಕೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್ ಪ್ರಶ್ನಿಸಿದೆ. ತಮಿಳುನಾಡಿನಲ್ಲಿರುವ 23 ಸ್ಥಿರಾಸ್ತಿಗಳನ್ನು ಹರಾಜು ಹಾಕುವ ಟಿಟಿಡಿ ನಿರ್ಧಾರವನ್ನು ಆಂಧ್ರ ಪ್ರದೇಶದ ವಿರೋಧ ಪಕ್ಷಗಳು ಖಂಡಿಸಿವೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿವೆ. ದೇವಾಲಯಕ್ಕೆ ಭಕ್ತರು ನೀಡಿರುವ ಸ್ಥಿರಾಸ್ತಿಗಳನ್ನು ನಿರ್ವಹಿಸಲು ಆಗದ ಪಕ್ಷದಲ್ಲಿ ಹರಾಜು ಮೂಲಕ ಮಾರಾಟ ಮಾಡಲು ಕಾನೂನು ಪ್ರಕಾರ ಅವಕಾಶ ಇದೆ. ಟಿಟಿಡಿ ಕೂಡ ನಿರ್ವಹಿಸಲು ಆಗದ 129 ಸ್ಥಿರಾಸ್ತಿಗಳನ್ನು 1974ರಿಂದ 2014ರವರೆಗೆ ಮಾರಾಟ ಮಾಡಿದೆ. ಆಗ ವ್ಯಕ್ತವಾಗದ ಆಕ್ಷೇಪ ಈಗೇಕೆ ಎಂದು ಟಿಟಿಡಿ ಅಧ್ಯಕ್ಷ ವೈ.ಎಸ್.ಸುಬ್ಬಾರೆಡ್ಡಿ ಪ್ರಶ್ನಿಸಿದ್ದಾರೆ.

ತಮಿಳುನಾಡಿನಲ್ಲಿ ಹರಾಜು ಹಾಕಲು ಗುರುತಿಸಲಾಗಿರುವ 23 ಆಸ್ತಿಗಳ ಒಟ್ಟು ಮೌಲ್ಯ 1.50 ಕೋಟಿ ರೂ. ಎಂದು ಅಂದಾಜಿಲಾಗಿದೆ. ಈ ನಿರ್ಧಾರವನ್ನು ಫೆ. 29ರಂದು ಕೈಗೊಳ್ಳಲಾಗಿದೆ. ನಿರ್ವಹಣೆ ಇಲ್ಲದ ಅನೇಕ ಆಸ್ತಿಗಳು ಒತ್ತುವರಿ ಆಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net