

ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ 3 ದಿನಗಳಿಂದ ‘ಜನಾಶೀರ್ವಾದ ಯಾತ್ರೆ’ ಮೂಲಕ ರಾಜ್ಯ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ನಿತ್ಯವೂ ನೂರಾರು ಕಿಮೀ ಪ್ರಯಾಣ ನಡೆಸುವುದರ ಜತೆಗೆ ರೋಡ್ ಶೋ, ವೇದಿಕೆ ಕಾರ್ಯಕ್ರಮ, ಸಂವಾದ ಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲೇ, ಮೋದಿ ಸರ್ಕಾರದ ಸಾಧನೆಗಳು ಹಾಗೂ ತಮ್ಮ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
#ಯಾತ್ರೆ ಎಲ್ಲೆಲ್ಲಿ ಸಾಗಿದೆ? ಸ್ಪಂದನೆ ಹೇಗಿದೆ?
ಎಲ್ಲ ರಾಜಕೀಯಗಳ ಹೊರತಾಗಿ ನನಗೆ ಈ ಯಾತ್ರೆ ನಿಜಕ್ಕೂ ಪ್ರಯೋಜನಕಾರಿಯಾಯಿತು. ಸಾಕಷ್ಟು ಮಂದಿ ಕೋವಿಡ್ ವಾರಿಯರ್ಗಳು ಮಾಡಿರುವ ಕೆಲಸ ಅಮೋಘ. ಶಿವಮೊಗ್ಗದಲ್ಲಿ ನಾಗೇಶ್ ಎಂಬುವರು ಕೋವಿಡ್ನಿಂದ ಮೃತರಾದವರ ಅಂತ್ಯಸಂಸ್ಕಾರ ನಡೆಸುತ್ತಿರುವುದನ್ನು ತಿಳಿದುಕೊಂಡೆ. ಶಿರಸಿಯಂತಹ ಜಾಗದಲ್ಲಿ ಅಡಕೆ ಬೆಳೆಗಾರರ ಸಮಸ್ಯೆಗಳು, ಕೊಂಕಣ ರೈಲ್ವೆಗೆ ಜಾಗ ಬಿಟ್ಟುಕೊಟ್ಟು ಈಗ ಸಮಸ್ಯೆಯಲ್ಲಿರುವ ಕೃಷಿಕರು ಇತ್ಯಾದಿಗಳು ಬೇರೆ ಹಂತದಲ್ಲಿ ನಮಗೆ ತಿಳಿದುಕೊಳ್ಳಲು ಸಾಧ್ಯವೇ ಇರಲಿಲ್ಲ. ಹುಬ್ಬಳ್ಳಿಯಲ್ಲಿ ಇನ್ಪೋಸಿಸ್ನವರು 350 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್ ನಿರ್ವಿುಸಿ ಕೆಲವರ್ಷಗಳೇ ಆದರೂ ಅದು ಇನ್ನೂ ಕಾರ್ಯ ಶುರು ಮಾಡಿಲ್ಲ ಎಂಬಿತ್ಯಾದಿ ವಿಷಯ ಅರಿತುಕೊಳ್ಳುವಂತಾಗಿದೆ.
# ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಬರುವುದು ಖಚಿತ ಎನ್ನುತ್ತೀರಿ. ಹೇಗೆ ಅಷ್ಟು ಖಚಿತವಾಗಿ ಹೇಳುತ್ತೀರಿ?
ಹೌದು. ಹೊಸ ರೈತ ಕಾಯ್ದೆಯಿಂದ ಶೇ.80 ಸಣ್ಣ ರೈತರಿಗೆ ನೆರವಾಗಿದೆ. ಪಂಜಾಬ್ನ ಮಧ್ಯವರ್ತಿಗಳ ಕೇಂದ್ರಿತ ವ್ಯವಸ್ಥೆಯಿಂದಾಗಿ ದೊಡ್ಡ ರೈತರು ಪ್ರತಿಭಟನೆ ನಡೆಸು ತ್ತಿದ್ದಾರೆ. ಇನ್ನು ಕಾಂಗ್ರೆಸ್ ಫೇಕ್ ಸ್ಟೋರಿಗಳನ್ನು ಹರಡುತ್ತಿದೆ. ಬಿಜೆಪಿ ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿಲ್ಲ. ಸರ್ವವ್ಯಾಪಿ, ಸರ್ವರ್ಸ³ ರಾಜಕೀಯದಲ್ಲಿ ನಂಬಿಕೆ ಇರಿಸಿದ್ದು, ನಮ್ಮ ಗೆಲುವು ನಿಶ್ಚಿತ.
ರಾಜ್ಯದಲ್ಲಿ ಸ್ಕಿಲ್ ಸೆಂಟರ್
ಕರ್ನಾಟಕದಲ್ಲಿ ಹೆಚ್ಚು ಸ್ಕಿಲ್ ಸೆಂಟರ್ಗಳನ್ನು ಸ್ಥಾಪಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೌಶಲಾಭಿವೃದ್ಧಿ ನೀಡಲು ಒತ್ತು ನೀಡಲಾಗುವುದು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು.
ಜನಾಶೀರ್ವಾದ ಯಾತ್ರೆಗೆ ಭಾರಿ ಸ್ಪಂದನೆ
ಬೆಂಗಳೂರು: ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ನಡೆಸುತ್ತಿರುವ ಜನಾಶೀರ್ವಾದ ಯಾತ್ರೆಗೆ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ದಾವಣಗೆರೆ - ಚಿತ್ರದುರ್ಗದಲ್ಲಿ ಎ. ನಾರಾಯಣಸ್ವಾಮಿ, ರಾಯಚೂರು - ಯಾದಗಿರಿಯಲ್ಲಿ ಭಗವಂತ ಖೂಬಾ, ಚಿಕ್ಕಮಗಳೂರು - ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಹಾಗೂ ಕೊಡಗು- ಮಂಗಳೂರಿನಲ್ಲಿ ರಾಜೀವ್ ಚಂದ್ರಶೇಖರ್ ಬುಧವಾರ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಿದ್ದರು. ಜಿಲ್ಲೆಗಳಲ್ಲಿ ಸಚಿವರಿಗೆ ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ನೀಡಲಾಯಿತು.