ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಆಹಾರ ಸೇವಿಸಿ! | weight loss dessert

untitled-design-2025-10-03t185855038-68dfcfa7610d4
Published on

weight loss dessert : ಇಂದಿನ ದಿನಗಳಲ್ಲಿ ಹಲವಾರು ಜನ ತೂಕ ಇಳಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಜಿಮ್​, ಮಾತ್ರೆಗಳು, ಆರೋಗ್ಯ ತಪಾಸಣೆ ಹಾಗೂ ಇನ್ನಿತರವುಗಳ ಮೊರೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ನಿರಸೆ ಆಗಿದ್ದರೆ, ಅಂತವರು ಈ ರೀತಿಯ ಆಹಾರ ಸೇವಿಸಿ ಇದು ತೂಕ ಇಳಿಸಲು ಬಹಳಷ್ಟು ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು

* 2 ಕಪ್​ ಓಟ್ಸ್​

* 15 ಬಾದಾಮಿ

* 1 ಬೇಯಿಸಿದ ಆಲೂಗಡ್ಡೆ

* 1 ಕಪ್​ ಸಿಹಿಯಿಲ್ಲದ ಕೋಕೋ ಪುಡಿ

* 1/2 ಚಮಚ ದಾಲ್ಚಿನ್ನಿ ಪುಡಿ

* 2 ಚಮಚ ಪೀನಟ್​ ಬಟರ್​

* 5 ಖರ್ಜೂರ

* ಸ್ವಲ್ಪ ಹಾಲು

ಮಾಡುವ ವಿಧಾನ

ಮೊದಲು ಒಂದು ಮಿಕ್ಸಿ ಜಾರಿಗೆ ಓಟ್ಸ್​ ಹಾಗೂ ಬಾದಾಮಿ ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತರ ಒಂದು ಬೌಲ್​ಗೆ ಬೇಯಿಸಿದ ಆಲೂಗಡ್ಡೆ ಹಾಕಿ ಸ್ಮಾಶ್​ ಮಾಡಿಕೊಳ್ಳಿ. ಅದಕ್ಕೆ ಪುಡಿಮಾಡಿದ ಓಟ್ಸ್​ , ಕೋಕ್​ ಪೌಡರ್​, ದಾಲ್ನಿಚ್ಚಿ ಪುಡಿ, ಪೀನಟ್​ ಬಟರ್​, ಖರ್ಜೂರ ಮತ್ತು ಹಾಲನ್ನು ಮಿಕ್ಸಿ ಮಾಡಿ, ಬೇಕಿಂಗ್​ ಪುಡಿ ಹಾಕಿ ಮಿಕ್ಸ್​ ಮಾಡಿ. ನಂತರ ಒಂದು ಪಾತ್ರೆಗೆ ಮಾಡಿಟ್ಟಿರುವ ಮಿಶ್ರಣವನ್ನು ಸುರಿಯಿರಿ. ಈಗ ಅದಕ್ಕೆ ಮೇಲೆ ಬೇಕಾದಲ್ಲಿ ಚಾಕಲೇಟ್​ ಹಾಗೂ ಡ್ರೈ ಫ್ರೂಟ್​ಗಳನ್ನು ಹಾಕಿ ಓವನ್​ನಲ್ಲಿ ಬೇಯಿಸಿ ತಿನ್ನಿರಿ .....

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net