ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ ? ಹಾಗಿದ್ದರೆ ಈ ಆಹಾರವನ್ನು ಸೇವಿಸಿ...weight gain dessert

untitled-design-2025-10-08t162206016-68e6427c4f288 (1)
Published on

weight gain dessert : ಇಂದಿನ ದಿನಗಳಲ್ಲಿ ಹಲವಾರು ಜನ ತೂಕ ಹೆಚ್ಚಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಜಿಮ್​, ಮಾತ್ರೆಗಳು, ಆರೋಗ್ಯ ತಪಾಸಣೆ ಹಾಗೂ ಇನ್ನಿತರವುಗಳ ಮೊರೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ನಿರಾಸೆ ವ್ಯಕ್ತಪಡಿಸುತ್ತಾರೆ. ಹಾಗಾಗಿ ತೂಕ ಹೆಚ್ಚಿಸುಕೊಳ್ಳಲು ಪ್ರಯತ್ನಿಸುವವರು ಈ ರೀತಿಯ ಆಹಾರ ಸೇವಿಸಿ ಇದು ತೂಕ ಹೆಚ್ಚಿಸಲು ಬಹಳಷ್ಟು ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು

* 1 ಕಪ್ ಓಟ್ಸ್

* 1/4 ಕಪ್​ ಒಣದ್ರಾಕ್ಷಿ

* 1 ಚಮಚ ಕೋಕೋ ಪೌಡರ್​

* 1/2 ಕಪ್​ ಚೆರಿ

* 1 ಚಮಚ ಎಳ್ಳು

* ಬಾದಾಮಿ

* ಕಡಲೆಕಾಯಿ

* ಒಣದ್ರಾಕ್ಷಿ

* 2 ಬಾಳೆಹಣ್ಣು

* 1/2 ಕಪ್ ಡಾರ್ಕ್ ಚಾಕೊಲೇಟ್

* 1/2 ಚಮಚ ತೆಂಗಿನ ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ಓಟ್ಸ್​, ಒಣ ದ್ರಾಕ್ಷಿ, ಕೋಕೋ ಪೌಡರ್​, ಎಳ್ಳು ಹಾಕಿ ಇಟ್ಟುಕೊಳ್ಳಿ. ನಂತರ ಚೆರ್ರಿ, ಬಾದಾಮಿ, ಶೇಂಗಾ, ಕಪ್ಪುದ್ರಾಕ್ಷಿಯನ್ನು ಕತ್ತರಿಸಿ. ಇದಾದ ಬಳಿಕ ಬಾಳೆಹಣ್ಣನ್ನು ಮೆದುಗೊಳಿಸಿ ಅದನ್ನು ಮಿಶ್ರಣಕ್ಕೆ ಸೇರಿಸಿ ಅದಕ್ಕೆ ಜೇನುತುಪ್ಪ ಹಾಕಿ ಮಿಕ್ಸ್​ ಮಾಡಿ. ರೆಡಿ ಇಟ್ಟುಕೊಂಡಿರುವ ಮಿಶ್ರಣವನ್ನು ದುಂಡಾಕಾರದ ಟ್ರೇ ಒಳಗೆ ಹಾಕಿ. ಇದಾದ ಬಳಿಕ ಒಂದು ಬಟ್ಟಲಿಗೆ ಚಾಕೊಲೇಟ್​ನ್ನು ಮಿಕ್ಸಿಗೆ ಹಾಕಿ ಅದನ್ನು ಸಿರಪ್​​ ಮಾಡಿ ಅದನ್ನು ರೆಡಿ ಮಾಡಿಟ್ಟುಕೊಂಡಿರುವ ಚಾಕಲೇಟ್​ನ್ನು ಮೇಲೆ ಸುರಿಯಿರಿ. ನಂತರ ಸೇವಿಸಿ....(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net