

ಕಾರ್ಗಲ್: ಸೂರಿಲ್ಲದ ಲಾನುಭವಿಗಳನ್ನು ಗುರುತಿಸಿ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಆಶ್ರಯ ಸಮಿತಿ ನೂತನ ಸದಸ್ಯರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿ ಬುಧವಾರ ಆಶ್ರಯ ಸಮಿತಿಯ ನೂತನ ಕಚೇರಿ ಉದ್ಘಾಟನೆ ನೆರವೇರಿಸಿ, ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.
ಜೋಗ- ಕಾರ್ಗಲ್ ಪಪಂ ವ್ಯಾಪ್ತಿಯಲ್ಲಿ ಆಶ್ರಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸುವ ಕೆಲಸವನ್ನು ಈಗಿನಿಂದಲೇ ಸಮಿತಿ ಆರಂಭಿಸಬೇಕು. ಈ ಹಿಂದೆ ಜೋಗದ ರಿಸರ್ವ್ ಕ್ಯಾಂಪ್ ಮತ್ತು ಕಾರ್ಗಲ್‌ನ ಭಾಗ್ಯಮಂದಿರ ಪ್ರದೇಶದಲ್ಲಿ ಲಾನುಭವಿಗಳನ್ನು ಗುರುತಿಸಿ ಆಶ್ರಯ ನಿವೇಶನಗಳನ್ನು ನೀಡಲಾಗಿದೆ. ಆದರೆ ನಿವೇಶನಗಳಿಗೆ ಬೇಕಾದ ರಸ್ತೆ, ವಿದ್ಯುತ್, ನೀರು ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಜೋಗ-ಕಾರ್ಗಲ್ ಭಾಗದಲ್ಲಿ ಮೊದಲ ಹಂತದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಾಕಷ್ಟು ನಿವೇಶನಗಳನ್ನು ನೀಡಿದ್ದಾರೆ. ಈ ಭಾಗದಲ್ಲಿ ಇನ್ನಷ್ಟು ಜನರಿಗೆ ಆಶ್ರಯ ನಿವೇಶನ ಅಗತ್ಯವಿದೆ. ಆಶ್ರಯ ನಿವೇಶನಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು. ಇದೀಗ ಈ ಭಾಗದಲ್ಲಿ ಇನ್ನಷ್ಟು ನಿವೇಶನಗಳನ್ನು ಹಂಚುವ ನಿಟ್ಟಿನಲ್ಲಿ ಅಧಿಕಾರಿಗಳು ಕಂದಾಯ ಭೂಮಿಯನ್ನು ಗುರುತಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಮುಂದಿನ ಸಭೆಯಲ್ಲಿ ಇಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಜೋಗ-ಕಾರ್ಗಲ್ ಪಪಂ ವ್ಯಾಪ್ತಿಯ ನೂತನ ಆಶ್ರಯ ಸಮಿತಿ ಸದಸ್ಯರಾದ ಎಸ್.ಎಲ್.ರಾಜ್‌ಕುಮಾರ್, ಎಚ್.ಎಸ್.ಸಾದಿಕ್, ಸವಿತಾ ಸತೀಶ್, ಮಂಜುಳಾ, ಪಪಂ ನಾಮನಿರ್ದೇಶಿತ ಸದಸ್ಯರಾದ ಶ್ರೀಧರ್ ಲಿಂಗನಮಕ್ಕಿ, ಸತೀಶ್ ಮಹಾಲೆ, ಶ್ರೀಲತಾ ಸತ್ಯನ್ ಅವರನ್ನು ಸನ್ಮಾನಿಸಲಾಯಿತು. ಪಪಂ ಅಧ್ಯಕ್ಷ ಎಂ.ರಾಜು, ಉಪಾಧ್ಯಕ್ಷೆ ಜಯಲಕ್ಷ್ಮೀ, ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಸದಸ್ಯರಾದ ಪಿ.ಮಂಜುನಾಥ್, ಲಕ್ಷ್ಮೀರಾಜು, ಬಾಲಸುಬ್ರಮಣ್ಯ, ವಾಸಂತಿ ರಮೇಶ್, ನಾಗರಾಜ್ ವಾಟೆಮಕ್ಕಿ, ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸಂತೋಷ್‌ಕುಮಾರ್, ಸಾಗರ ನಗರಸಭೆ ಸದಸ್ಯ ಗಣಪತಿ, ಪ್ರಮುಖರಾದ ಉಮೇಶ್, ಸತೀಶ್ ಮಲ್ಲಕ್ಕಿ ಮತ್ತಿತರರಿದ್ದರು.