ದೇಹದಲ್ಲಿರುವ ಬೊಜ್ಜು ಕರಗಿಸಲು ಸವಿಯಿರಿ ಪನೀರ್​ ಮಸಾಲ! Fat loss recipe

paneer-69106cf97068e
Published on

Fat loss recipe: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವಂತಹ ಜನರ ಒತ್ತಡ, ಆಯಾಸ, ದೈಹಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳದೇ ಇರುವುದು ಅನೇಕ ಕಾಯಿಲೆಗಳನ್ನು ಉಂಟು ಮಾಡುತ್ತಿದೆ. ಇದು ಬೊಜ್ಜು, ರಕ್ತದೊತ್ತಡ, ಕಿಡ್ನಿ ವೈಫಲ್ಯ, ಹೃದಯ ರೋಗಗಳನ್ನು ಉಂಟು ಮಾಡುತ್ತದೆ. ಇಂತಹ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರಗಳಲ್ಲಿಯೇ ಪರಿಹಾರ ಕಂಡುಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಆಗಬಹುದು. ಹಾಗಾಗಿ ನೀವೇನಾದರೂ ಬೊಜ್ಜನ್ನು ನಿಯಂತ್ರಿಸಲು ಬಯಸಿದರೆ ಈ ಪನೀರ್​ ಮಸಾಲಾವನ್ನು ಸವಿಯಿರಿ.

ಬೇಕಾಗುವ ಪದಾರ್ಥಗಳು

* ಪನೀರ್​

* 2 ಚಮಚ ತುಪ್ಪ

* 1/2 ಚಮಚ ಅರಿಶಿಣ

* ರುಚಿಗೆ ಉಪ್ಪು

* ಸ್ವಲ್ಪ ಗರಂ ಮಸಾಲ

* ಕೊತ್ತುಂಬರಿ ಸೊಪ್ಪು

ಮಾಡುವ ವಿಧಾನ

ಶುದ್ಧವಾದ ಪನೀರ್​ನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ತವ ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಹಾಕಿ ಕತ್ತರಿಸಿದ ಪನ್ನೀರ್​ನ್ನು ಸ್ವಲ್ಪ ಹೊತ್ತು ಫ್ರೈ ಮಾಡಿ ಅದಕ್ಕೆ ಉಪ್ಪು, ಅರಿಶಿಣ, ಗರಂ ಮಸಾಲ ಪುಡಿ ಹಾಕಿ ಎರಡೂ ಬಾಗ ಬೇಯಿಸಿರಿ. ನಂತರ ಅದರ ಮೇಲೆ ಕೊತ್ತುಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಇರುವಾಗಲೇ ಸೇವಿಸಿರಿ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net