

Macron: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ತೆರಳುವ ವೇಳೆ ಅವರ ಬೆಂಗಾವಲು ಪಡೆ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಕಾರು ತೆಡೆದಿದ್ದು, ಕೊಂಚ ಕಾಲ ರಸ್ತೆಯಲ್ಲಿ ಹೈಡ್ರಾಮ ನಡೆಯಿತು.
ಹೌದು, ಮ್ಯಾಕ್ರನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ಭಾಷಣ ಮಾಡಿದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ. ಸಾಮಾನ್ಯ ಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಪ್ಯಾಲೆಸ್ಟೈನ್ ರಾಜ್ಯವನ್ನು ಔಪಚಾರಿಕವಾಗಿ ಗುರುತಿಸುವುದಾಗಿ ಘೋಷಿಸಿದರು. ಬಳಿಕ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದ ಹೊರ ಬಂದ ಫ್ರಾನ್ಸ್ ಅಧ್ಯಕ್ಷರನ್ನು ಬೆಂಗಾವಲು ಪಡೆ ಟ್ರಂಪ್ರ ಸನ್ನಿಹಿತ ಮಾರ್ಗವನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೊಲೀಸರು ಅವರನ್ನು ತಡೆದಿದ್ದಾರೆ.
ಕಾರಿನಿಂದ ಕೆಳಗಿಳಿದ ಎಮ್ಯಾನುಯೆಲ್ ಮ್ಯಾಕ್ರನ್, ಟ್ರಂಪ್ಗೆ ಕರೆ ಮಾಡಿ ''ನಾನು ಬೀದಿಯಲ್ಲಿ ಕಾಯುತ್ತಿದ್ದೇನೆ ಎಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರಿನಿಂದ ಕೆಳಗಿಳಿದ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಪೊಲೀಸರು ಹೇಳಿದ್ದು ಹೀಗೆ, '' “ಕ್ಷಮಿಸಿ, ಮಿಸ್ಟರ್ ಅಧ್ಯಕ್ಷರೇ, ಈಗ ಎಲ್ಲವೂ ನಿರ್ಬಂಧಿಸಲಾಗಿದೆ.” ಎಂದಿದ್ದಾರೆ.
ಬಳಿಕ ಟ್ರಂಪ್ಗೆ ತಕ್ಷಣಕ್ಕೆ ಪೋನ್ ಮಾಡಿದ ಮ್ಯಾಕ್ರನ್, “ ನಾನು ಎಲ್ಲಿದ್ದೇನೆ ಎಂದು ಊಹಿಸಿ, ನಾನು ಬೀದಿಯಲ್ಲಿ ಕಾಯುತ್ತಿದ್ದೇನೆ ಏಕೆಂದರೆ ಎಲ್ಲವೂ ನಿಮಗಾಗಿ ನಿರ್ಬಂಧಿಸಲಾಗಿದೆ.” ಎಂದು ಹೇಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವರದಿಗಳ ಪ್ರಕಾರ, ಅಮೆರಿಕ ಅಧ್ಯಕ್ಷರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಪ್ರಯಾಣಿಸಿದಾಗಲೆಲ್ಲಾ, ಭದ್ರತಾ ಹಿನ್ನೆಲೆ "ಫ್ರೀಜ್"(ನಿರ್ಬಂಧ) ಎಂದು ಕರೆಯಲ್ಪಡುವದನ್ನು ವಿಧಿಸುತ್ತವೆ. ಇದು ವಿಶ್ವಸಂಸ್ಥೆಯ ಸುತ್ತಲಿನ ಹಲವಾರು ಬ್ಲಾಕ್ಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸುತ್ತದೆ.(ಏಜೆನ್ಸೀಸ್)