ಟ್ರಂಪ್​ ಸುಂಕ ಸಮರ: ಅಮೆರಿಕ ಮಣಿಯದಿದ್ದರೆ ಸೂಕ್ತವಾದ ಪ್ರತಿಕ್ರಿಯೆ ನೀಡುತ್ತೇವೆ ಎಂದು China ಎಚ್ಚರಿಕೆ​

China
Published on

ಬೀಜಿಂಗ್: ಚೀನಾದ ಆಮದುಗಳ ಮೇಲೆ ಶೇ.155 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಗೆ ಪ್ರತಿಕ್ರಿಯಿಸಿರುವ ಚೀನಾ(China) ಯುಎಸ್​ ತನ್ನ ತಪ್ಪನ್ನು ಸರಿಪಡಿಸಿಕೊಂಡು ಮಾತುಕತೆಯ ಮೂಲಕ ವ್ಯಾಪಾರ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕಾನ್ಸುಲ್ ಜನರಲ್ ಕ್ಸು ವೀ, ಅಮೆರಿಕ ಮಣಿಯದಿದ್ದರೆ ಚೀನಾ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ. ಈ ವ್ಯಾಪಾರ ಯುದ್ಧದ ಬಗ್ಗೆ ನಮ್ಮ ಚೀನಾ ನಿಲುವು ತುಂಬಾ ಸ್ಪಷ್ಟವಾಗಿದೆ. ನಿಮಗೆ ತಿಳಿದಿದೆ. ನಮಗೆ ಈ ಸಂಘರ್ಷ ಬೇಡವಾಗಿದೆ. ಆದರೆ, ನಮ್ಮನ್ನು ಕೆಣಕಿದರೆ, ನಾವು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತೇವೆ. ನಾವು ಅಗತ್ಯವಿದ್ದರೆ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ವೀ, ಅಮೆರಿಕ ಮಾತನಾಡಲು ಬಯಸಿದರೆ ನಮ್ಮ ಬಾಗಿಲುಗಳು ತೆರೆದಿರುತ್ತವೆ. ಆದ್ದರಿಂದ ಸಹಕಾರವು ಎರಡೂ ಕಡೆಯವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಾವು ಅಮೆರಿಕ ಸರ್ಕಾರಕ್ಕೆ ಪದೇ ಪದೇ ಹೇಳುತ್ತಲೇ ಇರುತ್ತೇವೆ. ಪ್ರತಿಸ್ಪರ್ಧೆ ಎಲ್ಲರಿಗೂ ನೋವುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

ಈ ತಪ್ಪನ್ನು ಸರಿಪಡಿಸಿಕೊಂಡು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕೆಂದು ನಾವು ಅಮೆರಿಕವನ್ನು ಒತ್ತಾಯಿಸುತ್ತೇವೆ. ಆದ್ದರಿಂದ ಯುಎಸ್​ ಹಾಗೆ ಮಾಡದಿದ್ದರೆ, ಚೀನಾ ನಮ್ಮ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವೀ ವಾಗ್ದಾಳಿ ನಡೆಸಿದ್ದಾರೆ.

ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡದಿದ್ದರೆ ನವೆಂಬರ್ 1 ರಿಂದ ಶೇಕಡಾ 155 ರಷ್ಟು ಕಡಿದಾದ ಸುಂಕ ವಿಧಿಸುವ ಸಾಧ್ಯತೆಯ ಬಗ್ಗೆ ಟ್ರಂಪ್ ಕಳೆದ ವಾರ ಚೀನಾಕ್ಕೆ ಕಠಿಣ ಎಚ್ಚರಿಕೆ ನೀಡಿದ್ದರು.

ಚೀನಾ ಸುಂಕ ಹೇರಿಕೆಯ ಬಗ್ಗೆ ಟ್ರಂಪ್​ ಹೇಳಿದ್ದೇನು..?

ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಬೀಜಿಂಗ್ ವಾಷಿಂಗ್ಟನ್ ಬಗ್ಗೆ ತುಂಬಾ ಗೌರವ ಹೊಂದಿದೆ ಮತ್ತು ಅಮೆರಿಕಕ್ಕೆ ತಮ್ಮ ಸರಕುಗಳ ಮೇಲೆ ವಿಧಿಸಲಾದ ಶೇಕಡಾ 55 ರಷ್ಟು ಸುಂಕದ ಬೆನ್ನಿನಲ್ಲಿ ಅಗಾಧ ಪ್ರಮಾಣದ ಹಣವನ್ನು ಪಾವತಿಸುತ್ತಿದ್ದಾರೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಟ್ರಂಪ್​, ಹಲವು ದೇಶಗಳು ಅಮೆರಿಕದಿಂದ ಲಾಭ ಪಡೆದವು. ಇನ್ನು ಮುಂದೆ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ನಾವು ಒಪ್ಪಂದ ಮಾಡಿಕೊಳ್ಳದ ಹೊರತು ಚೀನಾ ಶೇ.55 ರಷ್ಟು ಮತ್ತು ಸಂಭಾವ್ಯ ಶೇ.155 ರಷ್ಟು ನವೆಂಬರ್ 1 ರಂದು ಪಾವತಿಸಲಿದೆ ಎಂದಿದ್ದಾರೆ.

ಚೀನಾ ಮತ್ತು ಭಾರತ ಎರಡೂ ವಾಸ್ತವವಾಗಿ ಬಹಳಷ್ಟು ಸಾಮ್ಯತೆಗಳನ್ನು ಹೊಂದಿವೆ. ಆದರೆ ನಮಗೆ ಕೆಲವು ವಿಭಿನ್ನ ದೃಷ್ಟಿಕೋನಗಳಿವೆ. ಅಲ್ಲದೆ, ಎರಡೂ ಸರ್ಕಾರಗಳು ಈ ಸವಾಲನ್ನು ನಮ್ಮ ಎರಡೂ ದೇಶಗಳಿಗೆ ಪ್ರಯೋಜನವಾಗುವಂತೆ ಹೇಗೆ ಬಳಸುವುದು ಎಂಬುದರ ಕುರಿತು ಚರ್ಚಿಸಿವೆ ಎಂದು ವೀ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net