ಇಂಗ್ಲಿಷ್ ಅಮೆರಿಕದ ಅಧಿಕೃತ ಭಾಷೆ ಎಂದು ಟ್ರಂಪ್ ಆದೇಶ

8-67c4a01a11172
Published on

ವಾಷಿಂಗ್ಟನ್: ಇಂಗ್ಲಿಷ್ ಅನ್ನು ಅಮೆರಿಕದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ.

ಇಂಗ್ಲಿಷ್ ರಾಷ್ಟ್ರೀಯ ಭಾಷೆಯಾಗಿದ್ದು ಇದು ಏಕತೆಯನ್ನು ಉತ್ತೇಜಿಸುತ್ತದೆ. ಸರ್ಕಾರಿ ಕಾರ್ಯನಿರ್ವಹಣೆಯನ್ನು ದಕ್ಷತೆಯನ್ನು ತರುತ್ತದೆ ಎಂದು ಶ್ವೇತಭವನ ತಿಳಿಸಿದೆ. ಪ್ರಸ್ತುತ ಅಮೆರಿಕದ 30ಕ್ಕೂ ಹೆಚ್ಚು ರಾಜ್ಯಗಳು ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಗುರುತಿಸಿದ್ದು, ಇಂಗ್ಲಿಷ್ ಭಾಷೆಯಲ್ಲಿಯೇ ಸಂವಹನ ನಡೆಸುತ್ತಿವೆ. ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಸೆನೆಟರ್​ಗಳು ಹಲವು ದಶಕಗಳಿಂದ ಒತ್ತಾಯಿಸುತ್ತಿದ್ದರು. ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಘೋಷಿಸಲಾಗಿದೆ.

ಟ್ರಂಪ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶ್ವೇತಭವನದ ವೆಬ್​ಸೈಟ್​ನಲ್ಲಿ ಸ್ಪಾನಿಷ್ ಭಾಷೆಯ ಆವೃತ್ತಿಯನ್ನು ಡಿಲಿಟ್ ಮಾಡಲಾಗಿತ್ತು. ಟ್ರಂಪ್ ತಾವು ಮೊದಲ ಬಾರಿ ಅಧ್ಯಕ್ಷರಾಗಿದ್ದಾಗಲೂ ವೆಬ್​ಸೈಟ್ ನಲ್ಲಿ ಸ್ಪಾನಿಷ್ ಆವೃತ್ತಿಯನ್ನು ಡಿಲಿಟ್ ಮಾಡಿಸಿದ್ದರು. ಆದರೆ ಜೋ ಬೈಡೆನ್ ಮತ್ತೆ ಸ್ಪಾನಿಷ್ ಭಾಷೆಯ ಆವೃತ್ತಿಯನ್ನು ವೆಬ್​ಸೈಟ್​ಗೆ ಸೇರ್ಪಡೆಗೊಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net