ಟ್ರಂಪ್ ನೊಬೆಲ್ ನಾಮನಿರ್ದೇಶನಕ್ಕೆ ಕಾಶ್ಮೀರದ ಕನೆಕ್ಷನ್ !

Trump
Published on

ಒಸ್ಲೋ: ಇಸ್ರೇಲ್​-ಯುಎಇ ನಡುವಿನ ಶಾಂತಿ ಒಪ್ಪಂದ ಏರ್ಪಡುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ನಾಮನಿರ್ದೇಶನ ಮಾಡಿದ ನಾರ್ವೇ ರಾಷ್ಟ್ರದ ಸಂಸತ್​ ಸದಸ್ಯ ಕ್ರಿಸ್ಟಿಯನ್​ ಟೈಬ್ರಿಗ್​-ಜೆಡ್ಡೆ ಕಾಶ್ಮೀರದ ವಿಚಾರವನ್ನೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ!

ಟ್ರಂಪ್​ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾಶ್ಮೀರ ಗಡಿ ವಿವಾದದಂತಹ ಇತರ ಸುದೀರ್ಘ ಸಂಘರ್ಷಗಳಲ್ಲಿ ಹೊಸ ಡೈನಾಮಿಕ್ಸ್ ಅನ್ನು ಸೃಷ್ಟಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಇದೇ ರೀತಿ, ಉತ್ತರ ಮತ್ತು ದಕ್ಷಿಣ ಕೊರಿಯಾ ಸಂಭಂಧಗಳಲ್ಲೂ ಹೊಸ ಸಂಬಂಧಕ್ಕೆ ನಾಂದಿ ಹಾಡಿದ್ದಾರೆ. ಈ ಪ್ರಯತ್ನಗಳೊಂದಿಗೆ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರೆಂದರೆ ಒಂದೋ ಯುದ್ಧಕ್ಕೆ ಕಾರಣಕರ್ತರಾಗುತ್ತಾರೆ ಅಥವಾ ಅಮೆರಿಕವನ್ನು ಶಸ್ತ್ರಾಸ್ತ್ರ ಸಮರಕ್ಕೆ ಒಡ್ಡಿಬಿಡುತ್ತಾರೆ ಎಂಬ 39 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿಗೆದ್ದ ಕೊನೆಯ ಅಧ್ಯಕ್ಷ ಜಿಮ್ಮಿ ಕಾರ್ಟರ್ ಎಂಬುದನ್ನು ಅವರು ಸ್ಮರಿಸಿಕೊಂಡಿದ್ದಾರೆ.

ಜೆಡ್ಡೆ ನಾರ್ವೇ ಸಂಸತ್ತಿನ ನಾಲ್ಕು ಅವಧಿಯ ಸದಸ್ಯರಾಗಿದ್ದು, ನ್ಯಾಟೋ ಪಾರ್ಲಿಮೆಂಟರಿ ಅಸೆಂಬ್ಲಿಯಲ್ಲಿ ನಾರ್ವೇಯನ್ ಡೆಲಿಗೇಶನ್​ನ ಮುಖ್ಯಸ್ಥರಾಗಿದ್ದಾರೆ. ಫಾಕ್ಸ್ ನ್ಯೂಸ್ ಜತೆಗೆ ಮಾತನಾಡುತ್ತ ಅವರು ಇಸ್ರೇಲ್​-ಯುಎಇ ಶಾಂತಿ ಒಪ್ಪಂದ ಪ್ರಕ್ರಿಯೆಯಲ್ಲಿ ಟ್ರಂಪ್ ಪಾತ್ರ ಪ್ರಮುಖವಾದುದು. ಇದೇ ಕಾರಣಕ್ಕೆ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net