

ಭರತ್ಪುರ್: ಕೆಟ್ಟು ನಿಂತಿದ್ದ ಬಸ್ಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಮಂದಿ ಮೃತಪಟ್ಟು 12 ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಭರತ್ಪುರ್ನ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಸೆ.13) ಮುಂಜಾನೆ 4.30ಕ್ಕೆ ನಡೆದಿದೆ.
ಅಪಘಾತವಾದ ಸಂದರ್ಭದಲ್ಲಿ ಬಸ್, ರಾಜಸ್ಥಾನದ ಪುಸ್ಕರ್ನಿಂದ ಉತ್ತರ ಪ್ರದೇಶದ ಬೃಂದಾವನಗೆ ತೆರಳುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೇತುವೆ ಮೇಲೆ ಬಸ್ ಕೆಟ್ಟು ನಿಂತಿದ್ದ ಸಂದರ್ಭದಲ್ಲಿ ಚಾಲಕ ಮತ್ತು ಕೆಲ ಪ್ರಯಾಣಿಕರು ಬಸ್ ಹಿಂಭಾಗದಲ್ಲಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್, ಬಸ್ಗೆ ಡಿಕ್ಕಿ ಹೊಡೆಯಿತು ಎಂದು ಅಪಘಾತದಿಂದ ಬಚಾವ್ ಆದ ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಂಧನ ಖಾಲಿಯಾದ್ದರಿಂದ ಬಸ್, ಲಖನ್ಪುರ್ ಏರಿಯಾದ ಅಂತ್ರ ಫ್ಲೈಓವರ್ ಮೇಲೆ ನಿಂತಿತ್ತು. ಈ ವೇಳೆ ಟ್ರಕ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 5 ಪುರುಷರು ಮತ್ತು 6 ಮಹಿಳೆಯರು ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಸ್ನ ದುರಸ್ತಿ ಕಾರ್ಯ ನಡೆಯುತ್ತಿರುವಾಗ ಹೆದ್ದಾರಿಯಲ್ಲಿ ನಿಂತಿತ್ತು. ಈ ವೇಳೆ ಕೆಲವು ಪ್ರಯಾಣಿಕರು ಬಸ್‌ನಲ್ಲಿದ್ದರೆ, ಇನ್ನು ಕೆಲವರು ಹೊರಗೆ ನಿಂತಿದ್ದರು. ಈ ವೇಳೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಭರತ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೃದುಲ್ ಕಚವಾ ಹೇಳಿದ್ದಾರೆ. (ಏಜೆನ್ಸೀಸ್)