ವಕ್ಫ್ ತಿದ್ದುಪಡಿ ಮಸೂದೆಯಿಂದ ತೊಂದರೆ

srl (4)
ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಶಿರಾಳಕೊಪ್ಪದಲ್ಲಿ ಅಂಜುಮನ್ ಇಸ್ಲಾಂ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಮೌಲಾನಾ ಮುಸ್ತಾ ರಜಾ ನಯೀಮಿ, ಹನ್ೀ ಸಾಬ್, ಕಾರ್ಯದರ್ಶಿ ಅಬ್ದುಲ್ ಆಸ್ೀ, ಅಬ್ದುಲ್ ಜಬ್ಬಾರ್ ಸಾಬ್, ಇತರರಿದ್ದರು.
Published on

ಶಿರಾಳಕೊಪ್ಪ: ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಏನೂ ಲಾಭ ಇಲ್ಲ. ತೊಂದರೆಕೊಡುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ವಿಮಾನ ನಿಲ್ದಾಣ, ರೈಲ್ವೆ ವ್ಯವಸ್ಥೆ ಮತ್ತು ರಾಷ್ಟ್ರದ ಸಂಪತ್ತುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿದೆ. ಕೇಂದ್ರ ಸರ್ಕಾರ ವಕ್ಫ್ ಭೂಮಿಯನ್ನು ಕಬಳಿಸಿ ಶ್ರೀಮಂತ ಉದ್ಯಮಿಗಳಿಗೆ ಕೊಡುವ ಹುನ್ನಾರ ನಡೆಸಿದೆ. ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮೇತರರನ್ನು ಸೇರಿಸಿ ದೇಶದ ಜನರಲ್ಲಿ ಒಡಕು ಉಂಟುಮಾಡುವ ದುರಾಲೋಚನೆ ಸರ್ಕಾರದ್ದು ಎಂದು ಹಾವೇರಿ ಜಿಲ್ಲೆ ತುಮ್ಮಿನಕಟ್ಟೆ ಶ್ರೀ ಸ್ವಾಮಿ ವಿವೇಕಾನಂದ ಶಾಲೆ ವ್ಯವಸ್ಥಾಪಕ ಮೌಲಾನಾ ಮುಸ್ತಾ ರಜಾ ನಯೀಮಿ ದೂರಿದರು.

ಹಜರತ್ ಬಿಲಾಲ್ ಮಸೀದಿ ಗುರು ಮೌಲಾನ ರಾಹತ್ ಅಲಿ ಸಾಹೇಬ ಮಾತನಾಡಿ, ದೇಶದ ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಅದೇ ರೀತಿ ಹಕ್ಕುಗಳನ್ನು ಪಡೆಯಲು ಕೂಡ ಜೀವ ತ್ಯಾಗಮಾಡಲು ಸಿದ್ಧರಿದ್ದಾರೆ ಎಂದರು.

ಕಪ್ಪು ಪಟ್ಟಿ ಧರಿಸಿ, ಕಪ್ಪು ಬಾವುಟ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರವಾಸಿ ಮಂದಿರದಿಂದ ಸೊರಬ ರಸ್ತೆಯಲ್ಲಿರುವ ಈದ್ಗಾ ಮೈದಾನದವರೆಗೆ ಮೆರವಣಿಗೆ ನಡೆಸಿ ಉಪ ತಹಸೀಲ್ದಾರ್ ಸಾಕಮ್ಮ ಅವರಿಗೆ ಮನವಿ ಸಲ್ಲಿಸಿದರು.

ಅಂಜುಮನ್ ಇಸ್ಲಾಂ ಅಧ್ಯಕ್ಷ ಹನ್ೀ ಸಾಬ್, ಕಾರ್ಯದರ್ಶಿ ಅಬ್ದುಲ್ ಆಸ್ೀ, ಪ್ರಮುಖರಾದ ಅಬ್ದುಲ್ ಜಬ್ಬಾರ್ ಸಾಬ್, ದಸ್ತಗೀರ್ ಸಾಬ್, ಮುನ್ಾ ಸಾಬ್, ವಾಜಿದ್ ಸಾಬ್, ಅಕ್ರಮ್ ಸಾಬ್, ಹಾಶಂ ಸಾಬ್, ಪಾಚು ಹನ್ೀ ಸಾಬ್, ಮೊಹಮ್ಮದ್ ಶರ್ೀ, ಯಾಜ್ ಸಾಬ್, ಬಿ.ಚಮನ್ ಮಿಯಾ ಸಾಬ್, ಬಾಷಾ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net