ಟ್ರೋಲ್‌ಗೆಲ್ಲ ನಾನು ತಲೆ ಕೆಡಿಸಿಕೊಳ್ಳೋದಿಲ್ಲ; ಮಧು ಬಂಗಾರಪ್ಪ

Madhu bangarappa
ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ.
Published on

ಬೆಂಗಳೂರು: ಟ್ರೋಲ್ ಮಾಡಿ ನನ್ನನ್ನ ಬಗ್ಗಿಸೋಕೆ ಸಾಧ್ಯವಿಲ್ಲ. ನಾನು ಅಂತದ್ದಕ್ಕೆಲ್ಲ ಬಗ್ಗುವವನೂ ಅಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂಬ ವಿದ್ಯಾರ್ಥಿ ಅಭಿಪ್ರಾಯ ಮತ್ತು ನಂತರ ಆ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಸೂಚಿಸಿದ ವಿಚಾರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅಲ್ಲಿ ಕ್ರಮದ ಬಗ್ಗೆ ಏನೂ ಮಾತನ್ನಾಡಿಲ್ಲ. ಮಕ್ಕಳ ಮೇಲೆ ಪ್ರಾಂಶುಪಾಲರಿಗೆ ಹತೋಟಿ ಇರಬೇಕು. ಅದಕ್ಕೆ ನಾನು ಪ್ರಾಂಶುಪಾಲರಿಗೆ ಹೇಳಿದ್ದು. ಮಕ್ಕಳನ್ನ ಹತೋಟಿಯಲ್ಲಿಡಬೇಕು. 50 ಸಾವಿರ ಮಕ್ಕಳು ಲೈವ್ ನೋಡಿರುತ್ತಾರೆ. ತರಗತಿಯಲ್ಲಿ ಶಿಸ್ತು ಇರಬೇಕಲ್ಲವೇ? ಎಂದರು.

ನೀವು ಟ್ರೋಲ್ ಮಾಡಿದರೆ ನನಗೇನು? ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾಗೇಶ್ ನನ್ನನ್ನು ದಡ್ಡ ಅಂದರು. ಈ ದಡ್ಡನನ್ನು ಜನ ಗೆಲ್ಲಿಸಿದರು, ಬುದ್ಧಿವಂತರನ್ನು ಸೋಲಿಸಿದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net