

ಮುಂಬೈ: ಅನಿಮಲ್ ಸಿನಿಮಾದಲ್ಲಿ ನಟಿಸಿದ ನಂತರ ತೃಪ್ತಿ ಡಿಮ್ರಿ(Triptii dimri) ದೇಶಾದ್ಯಂತ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಆಕೆ ಯುವ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾಳೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ‘ಬ್ಯಾಡ್ ನ್ಯೂಸ್’ ಎಂಬ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದ ಡಿಮ್ರಿ ಸಂದರ್ಶನವೊಂದರಲ್ಲಿ ತನ್ನ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆಗ ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ, ಚಿತ್ರೀಕರಣದಲ್ಲಿ ಪ್ರತಿದಿನ ಅಳುತ್ತಿದ್ದೆ ಎಂದು ಹೇಳೊಕೊಂಡಿದ್ದಾರೆ.
'ನನಗೆ ಅಧ್ಯಯನದಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಮಾಡೆಲಿಂಗ್ ಕಡೆಗೆ ಬರಲು ನಿರ್ಧರಿಸಿದೆ. ಇದನ್ನು ನನ್ನ ಪಾಲಕರಿಗೆ ಹೇಳಿದಾಗ ಅವರು ಒಪ್ಪಲಿಲ್ಲ. ಆದರೂ ಒಪ್ಪಿಸಿ ಬಂದೆ ಎಂದಿದ್ದಾರೆ.
ಇನ್ನು ಇಂಡಸ್ಟ್ರಿಯ ಆರಂಭದ ದಿನಗಳಲ್ಲಿ ನಾನು ನಟನೆಯ ಮೂಲ ಅಂಶಗಳನ್ನು ಕಲಿತಿರಲಿಲ್ಲ. ವಿಭಿನ್ನವಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೆ. ಪ್ರತಿ ದೃಶ್ಯವನ್ನು ಸಹ ನಟರೊಂದಿಗೆ ಚರ್ಚಿಸುತ್ತಿದ್ದೆ. ನಾನು ಇಂಡಸ್ಟ್ರಿಗೆ ಬರಲು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆಯೇ ಎಂದು ಹಲವು ಬಾರಿ ಯೋಚಿಸಿದೆ. 'ಲೈಲಾ ಮಜ್ನಾ' ಸಮಯದಲ್ಲಿ ನಾನು ಪ್ರತಿದಿನ ಸೆಟ್‌ನಲ್ಲಿ ಅಳುತ್ತಿದ್ದೆ. ನನಗೆ ಅವರ ಭಾಷೆ ಅರ್ಥವಾಗುತ್ತಿರಲ್ಲ. ಮನೆಮನೆಗೆ ಹೋಗಿ ಪಾತ್ರದ ಸಂಭಾಷಣೆಗಳನ್ನು ಅಭ್ಯಾಸ ಮಾಡುತ್ತಿದ್ದೆ’ ಎಂದು ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ತೃಪ್ತಿ ಸದ್ಯ ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೀಸ್ ಬಾಜ್ಮಿ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸುತ್ತಿದ್ದಾರೆ. ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ.