

Donald Trump: ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭೇಟಿ ನೀಡಿದ ವೇಳೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಮೂರು ಘಟನೆಗಳ ಕುರಿತಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನಿಖೆಗೆ ಆದೇಶಿಸಿದ್ದಾರೆ.
ಮಂಗಳವಾರ (ಸೆಪ್ಟೆಂಬರ್ 23) ನ್ಯೂಯಾರ್ಕ್ ನಗರದಲ್ಲಿ ನಡೆದ 80 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್, ಸ್ಥಗಿತಗೊಂಡ ಎಸ್ಕಲೇಟರ್, ಅಸಮರ್ಪಕ ಟೆಲಿಪ್ರೊಂಪ್ಟರ್ ಮತ್ತು ಅಸೆಂಬ್ಲಿ ಹಾಲ್‌ನಲ್ಲಿನ ಮೈಕ್ ಸಮಸ್ಯೆಗಳು ಕಾಕತಾಳೀಯವಲ್ಲ, ನನ್ನ ಮಹತ್ವವನ್ನು ದುರ್ಬಲಗೊಳಿಸಲು ಮಾಡಿದ ಉದ್ದೇಶಪೂರ್ವಕ ಪ್ರಯತ್ನಗಳೆಂದು ಕಿಡಿಕಾರಿದ್ದಾರೆ
ಬುಧವಾರ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ವಿಶ್ವಸಂಸ್ಥೆ ನಾಚಿಕೆಪಡಬೇಕು, ಅಲ್ಲಿ ನಡೆದಿರುವ ಘಟನೆಗಳಿಂದ ತಮಗೆ ಅವಮಾನವಾಗಿದೆ. ಒಂದಲ್ಲ, ಎರಡಲ್ಲ, ಮೂರು ಕೆಟ್ಟ ಘಟನೆಗಳು!" ಎಂದು ಬರೆದಿದ್ದಾರೆ.
ಘಟನೆಗಳ ಹಿನ್ನಲೆ..