

ಕೊಳ್ಳೇಗಾಲ: ತಾಲೂಕಿನಲ್ಲಿ ಅದ್ದೂರಿಯಾಗಿ ನಡೆದಿದ್ದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ವರ್ಷದ ಜಯಂತಿ ಕಾರ್ಯಕ್ರಮದ ಆಚರಣಾ ಸಮಿತಿಯ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಗುರುವಾರ ಅಶೀರ್ವಾದಿಸಿ, ಸನ್ಮಾನಿಸಿದರು.
ಕಳೆದ 2024 ಡಿ.6 ಮತ್ತು 7 ರಂದು ಕೊಳ್ಳೇಗಾಲದಲ್ಲಿ ಅದ್ದೂರಿಯಾಗಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ವರ್ಷದ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು, ಸಮಿತಿಯ ಸದಸ್ಯರು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಶ್ರೀ ಸುತ್ತೂರು ಮಠದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ಜಯಂತಿಗೆ ಶ್ರಮಿಸಿದವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ಹಾಗೂ ಸದಸ್ಯರಿಗೆ ಶಿವರಾತ್ರಿ ಶ್ರೀ ದೇಶಿಕೇಂದ್ರ ಸ್ವಾ ಮೀಜಿ ಅವರು ಆಶೀರ್ವದಿಸಿ ಹಾರ, ಶಾಲು ಹಾಕುವ ಮೂಲಕ ಅಭಿನಂದಿಸಿದರು.
ಬಿಜೆಪಿ ಮುಖಂಡ ನಿಶಾಂತ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಧುವನಹಳ್ಳಿ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್ ಮೂಡ್ಲುಪುರ, ತಾಲೂಕು ಉಪಾಧ್ಯಕ್ಷ ರಾಜು ತಿಮ್ಮರಾಜೀಪುರ, ನಿರ್ದೇಶಕರಾದ ಮಹದೇವಸ್ವಾಮಿ ಯುಪಿಎಸ್, ಶಿವಕುಮಾರ್, ಅಚ್ಗಾಳ್ ಮಹದೇವಸ್ವಾಮಿ, ಕಿನಕಹಳ್ಳಿ ನಟರಾಜು, ನಾಗಾರ್ಜುನ್, ವೀರಭದ್ರಸ್ವಾಮಿ, ಕೆಂಪನಪಾಳ್ಯ ಮಹೇಶ್, ಮಂಜು ಮತ್ತಿತರರಿದ್ದರು.