ಲಯನ್ಸ್ ಕ್ಲಬ್‌ನಿಂದ ಯೋಧರಿಗೆ ಗೌರವಾರ್ಪಣೆ

ಕಾರ್ಗಿಲ್ ವಿಜಯೋತ್ಸವದ ಸವಿನೆನಪಿನಲ್ಲಿ ಮಂಗಳೂರು ಸೋಮೇಶ್ವರ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ವಿಜಯ್ ಸ್ಟಾರ್ ಪದಕ ಪುರಸ್ಕೃತ ಹವಿಲ್ದಾರ್ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

Published on
ಮಂಗಳೂರು: ಕಾರ್ಗಿಲ್ ವಿಜಯೋತ್ಸವದ ಸವಿನೆನಪಿನಲ್ಲಿ ಮಂಗಳೂರು ಸೋಮೇಶ್ವರ ಲಯನ್ಸ್ ಕ್ಲಬ್ ವತಿಯಿಂದ 27ನೇ ಕಾರ್ಗಿಲ್ ವಿಜಯ್ ದಿವಸವನ್ನು ಅತ್ಯಂತ ವಿಜೃಂಭಣೆ, ದೇಶಭಕ್ತಿಯ ಭಾವನೆ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.
ಸಂಸ್ಥೆಯ ಸುಮಾರು ಎಂಟು ಮಂದಿ ಮಾಜಿ ಸೈನಿಕ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವು ತಾಯಿ ನಾಡಿನ ರಕ್ಷಣೆಗಾಗಿ ಹೋರಾಡಿದ ವೀರ ಯೋಧರ ತ್ಯಾಗವನ್ನು ಸ್ಮರಿಸುವ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ದೇಶದ ಸುಭದ್ರತೆಗಾಗಿ ಹಾಗೂ ಸಾರ್ವಭೌಮತೆಗಾಗಿ ತಮ್ಮ ಪ್ರಾಣವನ್ನೇ ತರ್ಪಣವೆಂದು ನೀಡಿದ ವೀರ ಯೋಧರ ನೆನಪಿಗೆ ಪುಷ್ಪನಮನ ಸಲ್ಲಿಸಿ, ಅತ್ಯಂತ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಿ ಶೌರ್ಯ ಮೆರೆದ, ಗೌರವಾನ್ವಿತ ವಿಜಯ್ ಸ್ಟಾರ್ ಪದಕ ಪುರಸ್ಕೃತ ಹವಿಲ್ದಾರ್ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net