ನಿರುದ್ಯೋಗಿಗಳಿಗೆ ಕೃಷಿ ತರಬೇತಿ

29KDR1 ehwara
(ಈಶ್ವರ್)
Published on

ಕಡೂರು: ಜಿಲ್ಲೆಯ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಔಷಧ ಸಸ್ಯಗಳು, ತೋಟಗಾರಿಕಾ ಬೆಳೆ ಬೆಳೆಯಲು, ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲು ಶ್ರೀ ಕರುಣಾಸಾಯಿ ಹರಿಜನ ಗಿರಿಜನ ಅಭಿವೃದ್ಧಿ ವಿವಿಧೋದ್ದೇಶ ಸಹಕಾರ ಸಂಘ ತರಬೇತಿ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಕಾರವಾರ ಈಶ್ವರ್ ತಿಳಿಸಿದರು.
ಕರುಣಾ ಸಾಯಿ ಸಹಕಾರ ಸಂಘವು ಕಳೆದ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಕಾರವಾರ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ವ್ಯಾಪ್ತಿಗೆ ಬರುವ ನಿರುದ್ಯೋಗಿ ಯುವಕರಿಗೆ ಕಂದಾಯ, ಅರಣ್ಯ, ತೋಟಗಾರಿಕೆ, ಕೃಷಿ ಮತ್ತು ಶಿಕ್ಷಣ ಇಲಾಖೆಗಳ ಸಹಕಾರದೊಂದಿಗೆ ವಿವಿಧ ತರಬೇತಿ ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಔಷಧ ಸಸ್ಯ ಬೆಳೆಸಲು ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶದಂತೆ ಕಂದಾಯ, ಅರಣ್ಯ ಇಲಾಖೆಗೆ ಕೃಷಿ ಭೂಮಿ ನೀಡಲು ಆದೇಶ ನೀಡಿದ್ದು ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತವು ಜಿಲ್ಲೆಯಲ್ಲಿ 4,500 ಎಕರೆ ಭೂಮಿಯಲ್ಲಿ ಔಷಧ ಸಸ್ಯಗಳನ್ನು ಅಭಿವೃದ್ಧಿ ಪಡಿಸಲು ಗುರುತಿಸಿದೆ. ನಮ್ಮ ಸಹಕಾರ ಸಂಘವು ಈಗಾಗಲೆ ಜಿಲ್ಲೆಯಲ್ಲಿನ 250 ಯುವಕರನ್ನು ಗುರುತಿಸಿ ಸಸ್ಯಗಳನ್ನು ಬೆಳೆಯುವ, ಸಂರಕ್ಷಿಸುವ ಬಗ್ಗೆ ತರಬೇತಿ ನೀಡಲಾಗಿದೆ. ಅವರ ಪಟ್ಟಿಯನ್ನು ಆಡಳಿತಕ್ಕೆ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಡೂರು, ತರೀಕೆರೆ ಭಾಗಗಳಲ್ಲಿನ ಹೆಚ್ಚಿನ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. ಕಡೂರು ಭಾಗದ ಫಲವತ್ತಾದ ಮಣ್ಣಿನಲ್ಲಿ ತುಳಸಿ, ಲೈಮ್‌ಗ್ರಾಸ್ ಮತ್ತು ಶ್ರೀಗಂಧ ಬೆಳೆಯಲು ಭೂಮಿಯು ಯೋಗ್ಯವಾಗಿದ್ದು ಇದರ ಜತೆೆಗೆ ತೋಟಗಾರಿಕೆ ಬೆಳೆಗಳಾದ ವಿವಿಧ ರೀತಿಯ ಹಣ್ಣುಗಳು, ಕಾಯಿಗಳು ಹಾಗೂ ಔಷಧಿಗೆ ಎಲೆ, ಬೇರು, ಕಾಂಡದಂತಹ ಸಸ್ಯಗಳನ್ನು ಬೆಳೆಸಲು ತರಬೇತಿ ನೀಡಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net