ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

17 KRN-1
ಕೆ.ಆರ್.ನಗರದ ಮಧುವನಹಳ್ಳಿ ಬಡಾವಣೆಯ ನಿವಾಸಿಗಳು ಹಾಗೂ ಯುವಕರು ದೀಪಾವಳಿ ಹಬ್ಬದ ಅಂಗವಾಗಿ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು. ಕಾಂಗ್ರೆಸ್ ಮುಖಂಡ ಕಾಳಿಕುಮಾರ್, ಮುಖಂಡರಾದ ಸ್ವಾಮಿಗೌಡ್ರು, ಸಿದ್ದಲಿಂಗೇಗೌಡ್ರು, ಮೇಸ್ತ್ರಿ ಕುಮಾರ್, ಸುರೇಶ್, ಶಿವರಾಜ, ರವಿ, ದಿನೇಶ್, ಶಿವಕುಮಾರ್, ಮಹೇಶ್, ರಮೇಶ್, ಕೀರ್ತಿ ಸೇರಿದಂತೆ ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ಪಟ್ಟಣದ ಮಧುವನಹಳ್ಳಿ ಬಡಾವಣೆಯ 1, 22 ಹಾಗೂ 23ನೇ ವಾರ್ಡಿನ ನಿವಾಸಿಗಳು ಹಾಗೂ ಯುವಕರು ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು.

ಕಾಂಗ್ರೆಸ್ ಮುಖಂಡ ಕಾಳಿಕುಮಾರ್ ಮಾತನಾಡಿ, ನಮ್ಮ ಬಡಾವಣೆಯಿಂದ ಕಳೆದ 18 ವರ್ಷಗಳಿಂದ ನಿರಂತರವಾಗಿ ದೀಪಾವಳಿ ಹಬ್ಬದಂದು ನೂರಾರು ಭಕ್ತರು ಶ್ರೀ ಮಲೆ ಮಹದೇಶ್ವರ ಸ್ವಾಮಿಯನ್ನು ಪೂಜಿಸಲು ಇಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿ ಬೆಟ್ಟವನ್ನು ಹತ್ತಿ ತಮ್ಮ ಹರಿಕೆ ಹಾಗೂ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ ಎಂದರು.

ದೀಪಾವಳಿ ಹಬ್ಬಕ್ಕೆ 1 ವಾರ ಮುಂಚಿತವಾಗಿಯೇ ಕಾಲ್ನಡಿಗೆಯಲ್ಲಿ ತೆರಳುವ ಮಾದೇಶ್ವರನ ಭಕ್ತರ ಸಮೂಹ ತಮ್ಮ ಪಯಣದ ಉದ್ದಕ್ಕೂ ಊಟ ತಿಂಡಿಗೆ ಬೇಕಾಗುವಷ್ಟು ದಿನಸಿ ಪದಾರ್ಥಗಳು, ಆಹಾರ ಸಾಮಗ್ರಿಗಳು ಹಾಗೂ ಅಡುಗೆಗೆ ಬೇಕಾದ ಪಾತ್ರೆ ಪರಿಕರಗಳನ್ನು ಜತೆಯಲ್ಲಿಯೇ ಮೂರು ವಾಹನಗಳ ಮೂಲಕ ಕೊಂಡೊಯ್ಯುತ್ತಾರೆ. ಮೊದಲೇ ತಾವು ತಂಗುವ ಸ್ಥಳಗಳನ್ನು ನಿಗದಿ ಪಡಿಸಿಕೊಂಡಿಸಲಾಗಿರುತ್ತದೆ. ಆ ಸ್ಥಳಗಳಲ್ಲಿ ವಾಸ್ತವ್ಯ ಹೂಡಿ ಮತ್ತೆ ಮಾರನೇ ದಿನ ಬೆಳಗ್ಗೆ ಎದ್ದು ಪಯಣ ಪ್ರಾರಂಭಿಸುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾದಯಾತ್ರೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಲೆ ಮಹದೇಶ್ವರ ಟ್ರಸ್ಟ್ ಗೆ 20 ಸಾವಿರ ರೂ. ಮೌಲ್ಯದ ಪಾತ್ರೆಗಳನ್ನು ಕಾಳಿಕುಮಾರ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸ್ವಾಮೀಗೌಡ್ರು, ಸಿದ್ದಲಿಂಗೇಗೌಡ್ರು, ಶ್ರೀ ಮಲೆ ಮಹದೇಶ್ವರ ಟ್ರಸ್ಟ್ ಗೌರವಾಧ್ಯಕ್ಷ ಮೇಸ್ತ್ರಿ ಕುಮಾರ್, ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶಿವರಾಜ, ಖಜಾಂಚಿ ರವಿ, ಸಹಾಯ ಕಾರ್ಯದರ್ಶಿ ದಿನೇಶ್, ಸದಸ್ಯರಾದ ಶಿವಕುಮಾರ್, ಮಹೇಶ್, ರಮೇಶ್, ಕೀರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net