ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಸುಳಿವು

bommayi
Published on

ಬೆಂಗಳೂರು: ಮುಷ್ಕರ ಕೈಬಿಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳದಿದ್ದರೆ ಏನು ಮಾಡಬೇಕೆಂಬುದು ಸರ್ಕಾರಕ್ಕೆ ಗೊತ್ತಿದೆ ಎನ್ನುವ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಸ್ಮಾ ಜಾರಿಯ ಸುಳಿವು ನೀಡಿದರು. ಸಿಎಂ ನಿವಾಸ ‘ಕಾವೇರಿ’ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆ ಯಲ್ಲಿ ತೀರ್ವನಗಳಿಗೆ ಒಪ್ಪಿಕೊಂಡ ಮುಖಂಡರು ತಿರುಗಿ ಬಿದ್ದಿರುವುದು ಸರಿಯಲ್ಲ.ಈ ಕ್ಷಣಕ್ಕೂ ನೌಕರರ ಪರವಾಗಿ ಸರ್ಕಾರವಿದೆ ಎಂದರು.

ನೌಕರರ ಮಂಡಿಸಿದ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿದೆ. ಇದೇ ಕಾರಣಕ್ಕೆ ಸುದೀರ್ಘವಾಗಿ ಚರ್ಚೆ ನಡೆಸಿ, ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಸಂಧಾನ ಸಭೆಯಲ್ಲಿ ಪಾಲ್ಗೊಂಡ ಸಾರಿಗೆ ನೌಕರರು ಸಹಮತ ವ್ಯಕ್ತಪಡಿಸಿದ್ದರು. ನಂತರ ಉಲ್ಟಾ ಹೊಡೆದು ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. ಒಕ್ಕೂಟದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಬ್ಲ್ಯಾಕ್​ಮೇಲ್ ತಂತ್ರ, ಬೆದರಿಕೆಗಳಿಗೆ ಸರ್ಕಾರ ಬಗುವುದಿಲ್ಲ ಎಂದು ಬೊಮ್ಮಾಯಿ ಖಡಕ್ ಆಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net