

ಬೆಂಗಳೂರು: ಕುಡಿದ ಮತ್ತಿನಲ್ಲಿ ತೃತೀಯಲಿಂಗಿಯೊಬ್ಬರು ಯುವಕನೊಬ್ಬನಿಗೆ ಥಳಿಸಿರುವ ಘಟನೆ ರಾತ್ರಿ ಬ್ರಿಗೇಡ್ ರಸ್ತೆಯಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾತ್ರಿ ನಗರ ಬ್ರಿಗೇಡ್ ರಸ್ತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಮಂಗಳಮುಖಿಯೊಬ್ಬರು ಕಂಠಪೂರ್ತಿ ಕುಡಿದು ನಶೆಯಲ್ಲಿ ತೇಲಾಡಿದ್ದಲ್ಲದೆ, ತನ್ನ ಮೈಮುಟ್ಟಿದ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಥಳಿಸಿದ್ದಾರೆ.
ಇದಲ್ಲದೆ, ಪೊಲೀಸರ ಕಾಲಿಗೂ ಬಿದ್ದು ಹೊರಳಾಡಿ ರಸ್ತೆಯಲ್ಲಿ ರಂಪಾಟವಾಡಿದ್ದು, ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. (ದಿಗ್ವಿಜಯ ನ್ಯೂಸ್)