

ಅದು ಕಬ್ಬಿಣದ್ದೇ ಇರಲಿ, ಬಂಗಾರದ್ದೇ ಇರಲಿ ನೋವು ನೋವೇ. ಪಾಪದ ಫಲ ದುಃಖ, ಪುಣ್ಯದ ಫಲ ಸುಖ, ಎರಡನ್ನು ಉಣ್ಣಲೇಬೇಕು. ತನಗಾಗಿ ತನ್ನವರಿಗಾಗಿ ಮಾಡಿದ ಕರ್ಮಗಳೆಲ್ಲವೂ ಕರ್ಮದ ಸಂಕೋಲೆಯಾಗುತ್ತವೆ. ಪರಮಾತ್ಮನಿಗಾಗಿ ಮಾಡಿದ ಕರ್ಮಗಳೆಲ್ಲವೂ ಕರ್ಮಯೋಗವಾಗುತ್ತವೆ. ಈ ಕರ್ಮ ಜೀವನನ್ನು ಬಂಧಿಸಲಾರದು. ಆದ್ದರಿಂದ ಆದಿ ಸೃಷ್ಟಿಯಲ್ಲಿ ಮಾಯಾಸಂಬಂಧದಿಂದ ಜೀವರಿಗೆ ಪರಮಾತ್ಮನ ವಿಸ್ಮೃತಿಯುಂಟಾಗಿ ಕರ್ಮವಾಸನೆ ಅಂಟು ತ್ತಲೇ ಬಂದಿದೆ.
ಈ ವಾಸನೆಯಿಂದ ಮುಕ್ತನಾಗಬೇಕಾ ದರೆ ತನುವಿಯೋಗದೊಳು ದೇವನ ಪ್ರಾರ್ಥನೆ ನಡೆಯಬೇಕು. ಅದುವೇ ಪ್ರತ್ಯಾಭಿಜ್ಞಾ ಪ್ರತ್ಯಕ್ಷ. ಸದಾ ದೇವಚಿಂತನ ಶೀಲರಾಗಬೇಕು. ಉದಾ: ತುಕಾರಾಮರು ಸದಾ ಕನಸು ನನಸುಗಳಲ್ಲಿ ವಿಠಲನಾಮವನ್ನೇ ಹಾಸಿಹೊದ್ದಿದ್ದರು. ಒಮ್ಮೆ ಪಂಡಿತನೊಬ್ಬ ಹಿರಿದಾದ ಗ್ರಂಥ ತಂದು ತುಕಾರಾಮರಿಗೆ ಕೊಟ್ಟು ಹೇಳಿದ ಸ್ವಾಮಿ! ಇದನ್ನು ಓದಿ ಅರ್ಥ ನನಗೆ ತಿಳಿಸಿರಿ ಎಂದ. ಆಗ ತುಕಾರಾಮರು ತಮ್ಮಾ! ನನ್ನ ಮನದ ತುಂಬ ರಕ್ತದ ಕಣಕಣಗಳಲ್ಲಿ ವಿಠಲನ ನಾಮವೇ ತುಂಬಿಕೊಂಡಿರುವಾಗ ಇನ್ನೊಂದು ವಿಚಾರ ತುಂಬಲು ತಲೆಯಲ್ಲಿ ಖಾಲಿ ಜಾಗ ಇಲ್ಲ, ಈ ಗ್ರಂಥ ತೆಗೆದುಕೊಂಡು ಹೋಗು ಎಂದರಂತೆ. ವಿಠಲನ ನಾಮದಲ್ಲಿ ಅವರ ಮನ ಮಗ್ನಗೊಂಡಿತ್ತು.
ಅದರಂತೆ ತುಲಸಿದಾಸರು, ರಾಮರಾಮ ಮುನಿತನ ಕರಾಂಹಿ| ಅಂತರಾಮ ಕಂಹಿ ಆವತ ನಾಂಹಿ| ಅಂದರೆ ಎಲೆ ತಿಂದು ನೀರು ಕುಡಿದು ಕೊನೆಗೆ ಗಾಳಿಯನ್ನು ಕುಡಿದು ಸಾಯುವತನಕ ರಾಮ ರಾಮ ಅಂದರೂ ಸಹ ಮರಣ ಕಾಲಕ್ಕೆ ವಾಸನಾ ಬಲದಿಂದ ರಾಮಮಂತ್ರ ಮರೆಯಾಗಿ ಕಾಮವೇ ಬರುತ್ತದೆ ಎಂದು ಹೇಳಿದ್ದಾರೆ. ಇದೆ ವಾಸನೆಯ ಪ್ರತ್ಯಾಭಿಜ್ಞಾ ಪ್ರತ್ಯಕ್ಷ.