ಆರೋಗ್ಯ ಕ್ಷೇತ್ರದಲ್ಲಿ ತರಬೇತಿ ಅವಶ್ಯ

health (1)
ಸಾಗರದ ಜ್ಞಾನಸಾಗರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯೆ ಕಾವ್ಯಾ ವಿಕ್ರಮ್ ಅವರನ್ನು ಸನ್ಮಾನಿಸಲಾಯಿತು. ಅನುರಾಧಾ, ಚೈತ್ರಾ, ಸಿಂಚನಾ, ಭೂಮಿಕಾ ಇತರರಿದ್ದರು.
Published on

ಸಾಗರ: ಆರೋಗ್ಯ ಸೇವೆ ನೀಡುವವರಿಗೆ ಹೆಚ್ಚು ತರಬೇತಿ ಅವಶ್ಯ. ಅವರಲ್ಲಿ ಸೇವಾ ಭಾವನೆ ಇರಬೇಕು ಎಂದು ಉಪವಿಭಾಗೀಯ ಆಸ್ಪತ್ರೆಯ ವೈದ್ಯೆ ಕಾವ್ಯಾ ವಿಕ್ರಮ್ ಹೇಳಿದರು.

ಸಾಗರದ ಜ್ಞಾನಸಾಗರ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪರಸ್ಪರ-2025 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪ್ಯಾರಾ ಮೆಡಿಕಲ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗ ಅವಕಾಶಗಳು ಇರುತ್ತದೆ. ಕಲಿಕೆ ಸಂದರ್ಭದಲ್ಲಿ ಹೆಚ್ಚು ಏಕಾಗ್ರತೆ ಅಗತ್ಯ. ಪಾಲಕರು ಅನೇಕ ಕನಸುಗಳನ್ನು ಹೊತ್ತು ನಿಮ್ಮನ್ನು ಕಲಿಕೆಗೆ ಕಳಿಸಿರುತ್ತಾರೆ. ಅದರಲ್ಲಿಯೂ ಪ್ಯಾರಾ ಮೆಡಿಕಲ್‌ನಂತಹ ಶಿಕ್ಷಣ ಪಡೆಯುವುದು ಹಣಕ್ಕಿಂತ ಸೇವೆಯ ಉದ್ದೇಶಕ್ಕಾಗಿ ಎನ್ನುವುದು ಗಮನದಲ್ಲಿ ಇರಲಿ ಎಂದರು.

ಕಾಲೇಜಿನಲ್ಲಿ ಶಿಕ್ಷಣಕ್ಕೆ ಬೇಕಾದ ಎಲ್ಲ ಮೂಲ ಸೌಲಭ್ಯಗಳಿವೆ. ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಕಲಿಯುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಸಂಜಯ ವಿದ್ಯಾಕೇಂದ್ರದ ಕಾರ್ಯದರ್ಶಿ ಅನುರಾಧಾ ಕಾಗೋಡು, ಡಾ. ರಾಜನಂದಿನಿ ಕಾಗೋಡು, ಆಡಳಿತಾಧಿಕಾರಿ ಚೈತ್ರಾ, ಸಿಂಚನಾ, ಭೂಮಿಕಾ, ಜೆನ್ನಿಸ್, ಐಶ್ವರ್ಯಾ, ಸಂಜನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net