ಹಳಿತಪ್ಪಿದ ರೈಲು; ಮೂವರು ಸಾವು, ಹಲವರಿಗೆ ಗಾಯ; ಮುಂದುವರೆದ ಕಾರ್ಯಾಚರಣೆ | germany

train
Published on

ಬರ್ಲಿನ್; ದಕ್ಷಿಣ ಜರ್ಮನಿಯಲ್ಲಿ ನಿನ್ನೆ(28) ಪ್ರಯಾಣಿಕ ರೈಲು ಹಳಿತಪ್ಪಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯೂನಿಚ್‌ನಿಂದ ಪಶ್ಚಿಮಕ್ಕೆ ಸುಮಾರು 158 ಕಿಲೋಮೀಟರ್ ದೂರದಲ್ಲಿರುವ ರೀಡ್ಲಿಂಗೆನ್ ಬಳಿ ಈ ಅಪಘಾತ ಸಂಭವಿಸಿದೆ.

ಫ್ರೆಂಚ್ ಗಡಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಬೈಬೆರಾಚ್ ಜಿಲ್ಲೆಯ ರೀಡ್ಲಿಂಗೆನ್ ಬಳಿ ಈ ಘಟನೆ ಸಂಭವಿಸಿದೆ. ಅರಣ್ಯ ಪ್ರದೇಶದಲ್ಲಿ ಕನಿಷ್ಠ ಎರಡು ಬೋಗಿಗಳು ಹಳಿತಪ್ಪಿದಾಗ ರೈಲಿನಲ್ಲಿ ಸುಮಾರು 100 ಜನರಿದ್ದರು ಎನ್ನಲಾಗಿದೆ. ಅಪಘಾತ ಸ್ಥಳದಲ್ಲಿನ ಫೋಟೋಗಳಲ್ಲಿ ಅಲ್ಲಿನ ಸಿಬ್ಬಂದಿ ತಮ್ಮ ರಕ್ಷಣಾ ಕಾರ್ಯ ಮುಂದುವರೆಸಿರುವುದನ್ನು ಕಾಣಬಹುದಾಗಿದೆ. ಆರಂಭದಲ್ಲಿ ಗಾಯಗಳ ಪ್ರಮಾಣ ಸ್ಪಷ್ಟವಾಗಿಲ್ಲ ಎಂದು ಫೆಡರಲ್ ಪೊಲೀಸರು ಹೇಳಿದ್ದರು, ಆದರೆ ನಂತರ ಸ್ಥಳೀಯ ಅಧಿಕಾರಿಗಳು ಮೂವರು ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ..

(ಏಜೆನ್ಸೀಸ್)

ಇನ್ನೂ ಈ ಅಪಘಾತಕ್ಕೆ ಕಾರಣ ಇನ್ನೂ ಸಹ ತಿಳಿದುಬಂದಿಲ್ಲ ಮತ್ತು ಸಿಗ್ಮರಿಂಗೆನ್ ಮತ್ತು ಉಲ್ಮ್ ನಡುವಿನ 90 ಕಿಮೀ ಮಾರ್ಗದಲ್ಲಿ ರೈಲು ಕಾರ್ಯನಿರ್ವಹಿಸುತ್ತಿತ್ತು ಎಂದು ರೈಲು ನಿರ್ವಾಹಕ ಡಾಯ್ಚ ಬಾನ್ ಹೇಳಿದ್ದಾರೆ. ರೈಲು ಹಳಿತಪ್ಪಲು ಕಾರಣವೇನೆಂದು ತನಿಖೆ ನಡೆಯುತ್ತಿರುವುದರಿಂದ, ತುರ್ತು ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net