ದ್ವೀಪ ರಾಷ್ಟ್ರ ತೈವಾನ್​ನಲ್ಲಿ ಭೀಕರ ರೈಲು ಅಪಘಾತ: 48 ಜನ ಸಾವು

taiwan
Published on

ತೈವಾನ್: ದ್ವೀಪ ರಾಷ್ಟ್ರ ತೈವಾನ್​ನ ಪೂರ್ವ ಭಾಗದ ಹುವ್​ಲಿನ್ ಎಂಬಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 48 ಜನ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

ಸುಮಾರು 360 ಪ್ರಯಾಣಿಕರನ್ನು ಹೊತ್ತು ಹುವಲಿನ್ ಕಡೆಗೆ ಹೋಗುತ್ತಿದ್ದ ರೈಲು ಸುರಂಗ ಮಾರ್ಗವೊಂದರಲ್ಲಿ ಅಪಘಾತಕ್ಕೆ ಒಳಗಾಗಿದೆ. ಸುರಂಗ ಮಾರ್ಗದಲ್ಲಿ ಮೆಂಟೇನೆನ್ಸ್​ ವಾಹನವೊಂದು ನಿಂತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 60 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸರುಂಗ ಮಾರ್ಗದಲ್ಲಿ ಮೆಂಟೆನೆನ್ಸ್​ ವಾಹನವನ್ನು ಸರಿಯಾಗಿ ಪಾರ್ಕ್​ ಮಾಡಿಲ್ಲವಾಗಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿನ ದಶಕಗಳಲ್ಲಿ ತೈವಾನ್​​ನಲ್ಲಿ ಸಂಭವಿಸಿದ ಅತಿ ದೊಡ್ಡ ಅಪಘಾತವಾಗಿದೆ. ಅಲ್ಲಿನ ರಾಷ್ಟ್ರಾಧ್ಯಕ್ಷ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net