ಆಳವಾದ ಕಮರಿಗೆ ಬಿದ್ದ ಪಿಕಪ್ ವಾಹನ: 15 ಸಾವು, 8 ಮಂದಿಗೆ ಗಂಭೀರ ಗಾಯ

ac
Published on

ಕವರ್ಧಾ: ದೇಶವೇ ಬೆಚ್ಚಿ ಬೀಳಿಸುವಂತಹ ಭೀಕರ ಅಪಘಾತವೊಂದು ಸಂಭವಿಸಿದೆ. ಛತ್ತೀಸ್‌ಗಢದ ಕವರ್ಧಾದಲ್ಲಿ ಮಿನಿ ಪಿಕಪ್ ವಾಹನವೊಂದು ಆಳವಾದ ಕಮರಿಗೆ ಉರುಳಿ 14 ಮಹಿಳೆಯರು ಓರ್ವ ಪುರುಷ ಸೇರಿ 15 ಮಂದಿ ಸಾವನಪ್ಪಿದ್ದು ಎಂಟು ಮಂದಿ ಗಾಯಗೊಂಡಿರುವ ಭೀಕರ ದುರ್ಘಟನೆ ನಡೆದಿದೆ.

ಕುಕ್ದೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹಪಾನಿ ಗ್ರಾಮದ ಬಳಿ ಪಿಕ್-ಅಪ್ ವಾಹನದಲ್ಲಿ ಸಂತ್ರಸ್ತರು ಕಾಡಿನಿಂದ ಟೆಂಡು ಎಲೆಗಳನ್ನು ಕಿತ್ತು ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಬಳಿಕ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net