

ಹೈದ್ರಾಬಾದ್: ( Heart Attack ) ನಟ ನಾನಿ, ಹಿಟ್ 3 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ವೇಳೆ ಮಹಿಳಾ ಸಹಾಯಕ ಸಿನಿಮಾಟೋಗ್ರಾಫರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸದ್ಯ ಜಮ್ಮು ಕಾಶ್ಮೀರದಲ್ಲಿ ಹಿಟ್ 3 ಚಿತ್ರೀಕರಣ ನಡೆಯುತ್ತಿದೆ. ನಿನ್ನೆ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವಾಗಲೇ ಸಿನಿಮಾಟೋಗ್ರಾಫರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಈ ಚಿತ್ರಕ್ಕೆ ಸಹಾಯಕ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಕೆ.ಆರ್.ಕೃಷ್ಣ ಎಂಬ ಮಹಿಳೆಗೆ ಹೃದಯಾಘಾತವಾಗಿತ್ತು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದು, ಹಿಟ್ 3 ಚಿತ್ರ ಘಟಕದಲ್ಲಿ ದುರಂತ ಸಂಭವಿಸಿದೆ.
ನಟ ನಾನಿ ಸಿನಿಮಾದಿಂದ ಸಿನಿಮಾಗೆ ವಿಭಿನ್ನತೆ ಮೂಡಿಸುತ್ತಾ ಸತತ ಹಿಟ್‌ಗಳನ್ನು ಸಾಧಿಸುತ್ತಿದ್ದಾರೆ. ಅವರು ಇತ್ತೀಚೆಗೆ ಹಾಯ್ ನಾನ್ನ.. ಸಿನಿಮಾ ಹಿಟ್‌ಗಳೊಂದಿಗೆ ಫುಲ್ ಫಾರ್ಮ್‌ನಲ್ಲಿದ್ದಾರೆ. ಇದೀಗ ಹಿಟ್ 3 ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.