ಸಂಚಾರ ನಿಯಮಗಳನ್ನು ಪಾಲಿಸಬೇಕು; ರಮೇಶಕುಮಾರ

19-RNR-05
Published on

ರಾಣೆಬೆನ್ನೂರ: ದೇಶದಲ್ಲಿ ಕಳೆದ 2023ನೇ ಸಾಲಿನಲ್ಲಿ 5 ಲಕ್ಷ ಅಪಘಾತಗಳು ಸಂಭವಿಸಿದ್ದು, ಅಪಘಾತಗಳ ತಡೆಗೆ ಎಲ್ಲರೂ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಪ್ರಧಾನ ಮಂತ್ರಿ ಗ್ರಾಮ ಸಡಕ್​ ಯೋಜನೆಯ ತಾಂತ್ರಿಕ ಸಹಾಯಕ ರಮೇಶಕುಮಾರ ಹೂಗಾರ ಹೇಳಿದರು.

ತಾಲೂಕಿನ ಕಮದೋಡ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಯೋಜನಾ ಅನುಷ್ಠಾನ ವಿಭಾಗ, ಚೈತನ್ಯ ರೂರಲ್​ ಡೆವಲಪ್​ ಸೊಸೈಟಿ, ಗ್ರಾಪಂ ವತಿಯಿಂದ ಶನಿವಾರ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಅತಿ ಉದ್ದದ ರಸ್ತೆಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅಪಘಾತಗಳ ತಡೆಗೆ ಅಗತ್ಯ ಜಾಗೃತಿ ಮೂಡಿಸಬೇಕು. ಶೇ. 11ರಷ್ಟು ಸಾವು ಅಪಘಾತಗಳಿಂದ ಆಗುವುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದರು.

ಕಾರ್ಯನಿರ್ವಾಹಕ ಇಂಜಿನಿಯರ್​ ಅನಿಲಕುಮಾರ ಎಸ್​. ಮಾತನಾಡಿ, ಬೈಕ್​ ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸಬೇಕು. ಅತಿ ವೇಗದ ಚಾಲನೆ ಮೃತ್ಯುವಿಗೆ ಆಹ್ವಾನವಿದ್ದಂತೆ, 120 ಕಿ.ಮೀ. ವೇಗದಲ್ಲಿ ಹೋಗಿ 108ರಲ್ಲಿ ಬರುವುದು ಬೇಡ ಎಂದು ಕಿವಿಮಾತು ಹೇಳಿದರು.

ಗ್ರಾಪಂ ಉಪಾಧ್ಯಕ್ಷ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್​ ಇಲಾಖೆಯ ಬಿ.ಎನ್​. ಕುರುಬರ ಹಾಗೂ ರಮೇಶ ರಸ್ತೆ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು. ಜನನಿ ಕಲಾ ತಂಡದವರು ಬೀದಿ ನಾಟಕ ಪ್ರದಶಿರ್ಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಚೈತನ್ಯ ರೂರಲ್​ ಡೆವಲಮೆಂಟ್​ ಸೊಸೈಟಿಯ ಅಧ್ಯಕ್ಷ ಮಜೀದ ಎಸ್​.ಎಚ್​. ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ ಶರಣಬಸಪ್ಪ, ಲೆಕ್ಕಾಧಿ ಗುರುದೇವಿ ದೊಡ್ಡಮನಿ, ಸಹ ಶಿಕ್ಷಕಿ ಎನ್​.ಸಿ. ಹೊಸಕಟ್ಟಿ ಉಪಸ್ಥಿತರಿದ್ದರು. ಸಂಯೋಜಕಿ ಗೀತಾ ಸ್ವಾಗತಿಸಿದರು. ಶಿಕ್ಷಕ ಹೇಮಂತ ಎಸ್​.ಕೆ. ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net