

ನವದೆಹಲಿ: ಮಾರ್ಚ್ 25ರಿಂದ ಲಾಕ್ಡೌನ್ -1 ಶುರುವಾಯಿತು. ಅಲ್ಲಿಂದ ಲಾಕ್ಡೌನ್ 2 ಆಗಿ ಇದೀಗ ಲಾಕ್ಡೌನ್ 3 ಆರಂಭವಾಗಿದೆ. ಅಂದರೆ ಈಗಾಗಲೇ ಒಂದು ತಿಂಗಳು ಮುಗಿದು ಎರಡನೆಯ ತಿಂಗಳಿಗೆ ಕಾಲಿಟ್ಟಾಗಿದೆ.
ಈ ಅವಧಿಯಲ್ಲಿ ಕರೊನಾ ಸೋಂಕಿನ ಭೀತಿಯಿಂದ ಬಹುತೇಕ ಕಚೇರಿಗಳು ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಕೆಲಸ ನೀಡಿದ್ದರೆ, ಇನ್ನು ಹಲವಾರು ಸಂಸ್ಥೆಗಳಲ್ಲಿ ಕೆಲಸವೇ ಇಲ್ಲದೇ ಜನರು ಮನೆಯಲ್ಲಿಯೇ ಇದ್ದಾರೆ.
ಈ ಅವಧಿಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಈಚೆಗೆ ವರದಿ ಮಾಡಿದೆ. ಜತೆಗೆ, 70 ಲಕ್ಷಕ್ಕೂ ಅಧಿಕ ಮಹಿಳೆಯರು ಇಷ್ಟವಿಲ್ಲದ ಗರ್ಭವನ್ನು ಧರಿಸಿರುವ ಬಗ್ಗೆಯೂ ವರದಿಯಾಗಿದೆ.
ಇವುಗಳ ಬೆನ್ನಲ್ಲೇ ಆತಂಕಕಾರಿ ಎನ್ನುವ ವರದಿ ಈಗ ಬಹಿರಂಗಗೊಂಡಿದೆ. ಅದೇನೆಂದರೆ ಲಾಕ್ಡೌನ್ ಅವಧಿಯಲ್ಲಿ ಅಶ್ಲೀಲ ವೆಬ್ಸೈಟ್ಗಳ (ಪೋರ್ನ್ ವೆಬ್ಸೈಟ್) ವೀಕ್ಷಣೆಯಲ್ಲಿ ವಿಪರೀತ ಏರಿಕೆಯಾಗಿದೆ, ಇದರ ಸಂಖ್ಯೆ ಶೇ.95ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ! ಭಾರತದಲ್ಲಿ 3,500ಕ್ಕೂ ಅಧಿಕ ಅಶ್ಲೀಲ ವೆಬ್ಸೈಟ್ಗಳನ್ನು ನಿಷೇಧಿಸಲಾಗಿತ್ತು. ಆದರೂ ಇವುಗಳ ವೀಕ್ಷಣೆ ಸಂಖ್ಯೆ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಪೈಕಿ ಶೇ.89ರಷ್ಟು ಮಂದಿ ಪೋರ್ನ್ಸೈಟ್ಗಳನ್ನು ತಮ್ಮ ಸ್ಮಾರ್ಟ್ ಫೋನ್ನಲ್ಲಿಯೇ ನೇರವಾಗಿ ನೋಡುತ್ತಿದ್ದರೆ, ಶೇ.30ರಿಂದ 40ರಷ್ಟು ಭಾರತೀಯರು ಲಾಕ್ ಡೌನ್ ಸಂದರ್ಭದಲ್ಲಿ ಪೋರ್ನ್ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳಲಾಗಿದೆ.
ಅತೀ ಹೆಚ್ಚು ಪೋರ್ನ್ ವೀಡಿಯೋ, ಸಿನಿಮಾ ನೋಡುವ ಪಟ್ಟಿಯಲ್ಲಿ ಅಮೆರಿಕ, ಲಂಡನ್ ಮೊದಲೆರಡು ಸ್ಥಾನದಲ್ಲಿ ಇದ್ದರೆ, ಭಾರತ ಇಡೀ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ವರದಿ ವಿವರಿಸಿದೆ.
ಇಂಟರ್ನೆಟ್ ನೋಡಿ ಅಭ್ಯಾಸ ಮಾಡುತ್ತಿದ್ದಾರೆ ಅಂದುಕೊಂಡ್ರಾ?: ಲಾಕ್ಡೌನ್ ಅವಧಿಯಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಮೂಲಕ ಶಿಕ್ಷಣ ಕೊಡಲು ಶುರು ಮಾಡಿದೆ. ಆದರೆ ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಕೂತ ನಿಮ್ಮ ಮಕ್ಕಳು ಪ್ರತಿಸಲವೂ ಶಾಲೆಯ ಅಭ್ಯಾಸವನ್ನೇ ಮಾಡುತ್ತಿದ್ದಾರೆ ಎಂದು ತಪ್ಪು ಭಾವಿಸಬೇಡಿ ಎಂದಿದ್ದಾರೆ ತಜ್ಱರು.
ಏಕೆಂದರೆ, ಇತ್ತೀಚೆಗೆ ಸಂಸ್ಥೆಯೊಂದು ಬೆಂಗಳೂರು ಒಂದರಲ್ಲಿಯೇ 400 ವಿದ್ಯಾರ್ಥಿಗಳನ್ನು ಸಂದರ್ಶಿಸಿತ್ತು. ಅವರ ಪೈಕಿ ಆ ಮಕ್ಕಳಲ್ಲಿ ಶೇ.70ರಷ್ಟು ವಿದ್ಯಾರ್ಥಿಗಳು 10ನೇ ವಯಸ್ಸಿನಲ್ಲಿಯೇ ಅಶ್ಲೀಲ ವೀಡಿಯೋ ನೋಡಲು ಆರಂಭಿಸಿದ್ದರು ಎಂದು ಹೇಳಿದ್ದರು.
ತಮ್ಮ ಮಕ್ಕಳು ಇಂಟರ್ನೆಟ್ ಅನ್ನು ಕೇವಲ ಓದಲು ಮಾತ್ರ ಉಪಯೋಗಿಸುತ್ತಾರೆ ಎಂದು 10ರಲ್ಲಿ 9 ಪಾಲಕರು ಅಂದುಕೊಂಡಿರುತ್ತಾರೆ. ಆದರೆ ಅವರ ಪೈಕಿ ಹೆಚ್ಚಿನವರು ಇಂಥ ಪೋರ್ನ್ ಸೈಟ್ಗಳ ದಾಸರಾಗಿರುತ್ತಾರೆ ಎಂದು ವರದಿ ಎಚ್ಚರಿಸಿದೆ. ಆದರೆ ಹೊಸ ಪೀಳಿಗೆ ಮತ್ತು ವಿದ್ಯಾರ್ಥಿ ಸಮುದಾಯ ಉಚಿತ ಅಶ್ಲೀಲ ವಿಡಿಯೋ ನೋಡುವ ಮೂಲಕ ಅವರ ಭವಿಷ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅವರ ಮನಸ್ಸಿನ ಮೇಲೂ ಗಾಢ ಸಮಸ್ಯೆ ತಂದೊಡ್ಡಲಿದೆ ಎಂದು ಎಚ್ಚರಿಸಿದೆ. (ಏಜೆನ್ಸೀಸ್)