ಸಂಚಾರ ಸಿಕ್ಕು, ಸಿಲಿಕಾನ್ ಸಿಟಿಗೆ 3ನೇ ಸ್ಥಾನ

Traffic
Published on

ಬೆಂಗಳೂರು: ಜಾಗಕತಿ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ನಗರ, ಟ್ರಾಫಿಕ್ ಜಾಮ್‌ನಲ್ಲಿ 3ನೇ ಸ್ಥಾನದ ಕುಖ್ಯಾತಿಗೆ ಒಳಗಾಗಿದೆ.

ಟಾಮ್ ಟಾಮ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2024ನೇ ಸಾಲಿನಲ್ಲಿ ಕೊಲಂಬಿಯಾದ ಬ್ಯಾರನ್‌ಕ್ವಿಲ್ಲಾ ನಗರ ಮತ್ತು ಕೋಲ್ಕತಾ ಸಂಚಾರ ಸಿಕ್ಕು ವಿಚಾರದಲ್ಲಿ ಮೊದಲು ಮತ್ತು ದ್ವಿತೀಯ ಸ್ಥಾನದಲ್ಲಿದ್ದರೆ, ಬೆಂಗಳೂರು 3ನೇ ಸ್ಥಾನದಲ್ಲಿದೆ. 2023ರಲ್ಲಿ ಬೆಂಗಳೂರು 6ನೇ ಮತ್ತು 2022ರಲ್ಲಿ 2ನೇ ಸ್ಥಾನದಲ್ಲಿತ್ತು.

ಟಾಮ್ ಟಾಮ್ ವರದಿ ಪ್ರಕಾರ ಬೆಂಗಳೂರು ನಗರದಲ್ಲಿ 10 ಕಿ.ಮೀ. ಕ್ರಮಿಸಲು ವಾಹನಗಳಿಗೆ ಸರಾಸರಿ 30 ನಿಮಿಷ 10 ಸೆಕೆಂಡ್ ಬೇಕು. 2023ಕ್ಕೆ ಹೋಲಿಕೆ ಮಾಡಿದರೆ 50 ಸೆಕೆಂಡ್ ಹೆಚ್ಚಾಗಿದ್ದು, ಶೇ.4 ಹೆಚ್ಚು ಸಮಯ ಬೇಕಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಬ್ಯಾರನ್‌ಕ್ವಿಲ್ಲಾದಲ್ಲಿ 10 ಕಿ.ಮೀ. ಸಾಗಲು ಸರಾಸರಿ 36 ನಿಮಿಷ 6 ಸೆಕೆಂಡ್ ಮತ್ತು ಕೋಲ್ಕತಾದಲ್ಲಿ 34 ನಿಮಿಷ 33 ಸೆಕೆಂಡ್ ಅಗತ್ಯವಿದೆ ಎಂದು ಡೇಟಾ ತೋರಿಸುತ್ತದೆ. ದಟ್ಟಣೆ ಮಟ್ಟದ ಸೂಚ್ಯಂಕದಲ್ಲಿ ಬ್ಯಾರನ್‌ಕ್ವಿಲ್ಲಾ ಮತ್ತು ಕೋಲ್ಕತಾ ಕ್ರಮವಾಗಿ 16ನೇ ಮತ್ತು 169ನೇ ಸ್ಥಾನದಲ್ಲಿವೆ.

ಬೆಂಗಳೂರು ನಗರದಲ್ಲಿ ಸರಾಸರಿ ವೇಗ ಗಂಟೆಗೆ 17.6 ಕಿಮೀ ಮತ್ತು ಇದು 2023ಕ್ಕಿಂತ 0.5 ಕಿಮೀ /ಗಂಟೆ ನಿಧಾನವಾಗಿದೆ. ಬಾರನ್‌ಕ್ವಿಲ್ಲಾದಲ್ಲಿ ಸರಾಸರಿ ವೇಗವು ಗಂಟೆಗೆ 21.6 ಕಿಮೀ ಮತ್ತು ಕೋಲ್ಕತಾದಲ್ಲಿ ಗಂಟೆಗೆ 14.5 ಕಿಮೀ ಆಗಿತ್ತು. ಕಳೆದ ವರ್ಷ ಅ. 5ರಂದು ಭಾರೀ ಸಂಚಾರ ಸಿಕ್ಕು ಉಂಟಾಗಿತ್ತು. ಚಾಲಕರು 10 ಕಿಮೀ ಪ್ರಯಾಣಿಸಲು 39 ನಿಮಿಷ 21 ಸೆಕೆಂಡ್ ತೆಗೆದುಕೊಂಡಿದ್ದರು. ಆ ದಿನದ ದಟ್ಟಣೆಯ ಮಟ್ಟವು ಶೇ. 58 ಹೆಚ್ಚಾಗಿತ್ತು. ಬೆಳಗಿನ ಟ್ರಾಫಿಕ್ ಜಾಮ್‌ನಿಂದ ಸರಾಸರಿ 38 ನಿಮಿಷ 50 ಸೆಕೆಂಡ್ ಬೇಕಾಗಿದ್ದು, ಸರಾಸರಿ ವೇಗ ಗಂಟೆಗೆ 15.5 ಕಿಮೀ ಇರಲಿದೆ ಎಂದು ಟಾಮ್ ಟಾಮ್ ವರದಿ ಉಲ್ಲೇಖಿಸಿದೆ.

ಸಂಕುಚಿತ ಅಧ್ಯಯನ

ಟಾಮ್ ಟಾಮ್ ಸಂಚಾರ ಸಿಕ್ಕು ವಿಶ್ಲೇಷಣೆ ನಡೆಸಲು 55 ದೇಶಗಳಲ್ಲಿ 387 ನಗರಗಳನ್ನು ಅಧ್ಯಯನ ನಡೆಸಿದೆ. ಜಿಪಿಎಸ್ ಆಧಾರದ ಮೇಲೆ ಆಧಾರದ ಮೇಲೆ ವಿಶ್ಲೇಷಣೆ ಮಾಡಿದೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಸ್ತೆ ಅಭಿವೃದ್ಧಿ, ನಗರ ಭೂಪ್ರದೇಶ, ಸಾರ್ವಜನಿಕ ರಸ್ತೆ ಸಾರಿಗೆ ಸೌಲಭ್ಯ, ನಗರ ಅಭಿವೃದ್ಧಿ ಯೋಜನೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಪರಿಗಣಿಸುವಲ್ಲಿ ಟಾಮ್ ಟಾಮ್ ಸಂಸ್ಥೆ ವಿಲವಾಗಿದೆ. ಸಾಮಾನ್ಯವಾಗಿ ಯುರೋಪಿಯನ್ ಮಾನದಂಡಗಳ ಮೇಲೆ ಅಧ್ಯಯನ ನಡೆದಿದೆ. ಪ್ರಾದೇಶಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳನ್ನು ನಿರ್ಲಕ್ಷ್ಯ ವಹಿಸಿದ್ದಾರೆ. ಆದರಿಂದ ಸ್ಪಷ್ಟ ಲಿತಾಂಶವಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net