ಟ್ರಾಫಿಕ್ ಫೈನ್ ಶೇ.50 ಡಿಸ್ಕೌಂಟ್; 2 ತಿಂಗಳಲ್ಲಿ 9.24 ಕೋಟಿ ಸಂಗ್ರಹ

Traffic Fine (2)
Published on

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ನೀಡಲಾಗಿದ್ದ ಶೇ.50 ರಿಯಾಯಿತಿ ಸೌಲಭ್ಯ ಶನಿವಾರ ಅಂತ್ಯವಾಗಿದೆ. ಕಡೆಯ ದಿನ ಬರೋಬ್ಬರಿ 1.16 ಕೋಟಿ ರೂ. ಬಾಕಿ ದಂಡ ಸಂಗ್ರಹವಾಗಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ಣಯದಂತೆ ಫೆ.11ರೊಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಅನ್ವಯವಾಗುವಂತೆ ಬಾಕಿ ದಂಡದ ಮೊತ್ತ ಪಾವತಿಗೆ ಸಾರಿಗೆ ಇಲಾಖೆ ಜುಲೈ 6ರಿಂದ ಮೂರನೇ ಬಾರಿ ಶೇ.50 ರಿಯಾಯಿತಿ ಸೌಲಭ್ಯ ಕಲ್ಪಿಸಿತ್ತು.

ಅದರಂತೆ ಬೆಂಗಳೂರು ನಗರದಲ್ಲಿ ಜು.6ರಿಂದ ಸೆ.9ರ ವರೆಗೆ 2.92 ಲಕ್ಷ ಪ್ರಕರಣಗಳಿಂದ 9.24 ಕೋಟಿ ರೂ. ಬಾಕಿ ದಂಡ ಸಂಗ್ರಹವಾಗಿದೆ. ರಿಯಾಯಿತಿ ಸೌಲಭ್ಯಕ್ಕೆ ಕೊನೆಯ ದಿನವಾದ ಶನಿವಾರ ಒಂದೇ ದಿನ 39,273 ಪ್ರಕರಣಗಳಿಂದ 1.16 ಕೋಟಿ ರೂ. ಬಾಕಿ ದಂಡ ಸಂಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net