

ಕಂಪ್ಲಿ: ಪಟ್ಟಣದ ಎಲ್ಲ ವರ್ತಕರು ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಲು ಒತ್ತಾಯಿಸಿ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶನಿವಾರ ಪುರಸಭೆ ಜೆಇ ತೇಜಸ್ವಿನಿಗೆ ಮನವಿ ಸಲ್ಲಿಸಿದರು.
ವೇದಿಕೆ ಕಾರ್ಯಾಧ್ಯಕ್ಷ ಬಿ.ವಿರೂಪಾಕ್ಷಿ ಯಾದವ್ ಮಾತನಾಡಿ, ಪಟ್ಟಣದ ಎಲ್ಲ ವರ್ತಕರು ರಾಜ್ಯ ಸರ್ಕಾರದ ನಿಯಮದಂತೆ ಕನ್ನಡ ಭಾಷಾ ನಾಮಫಲಕಗಳನ್ನು ಅಳವಡಿಸಬೇಕು. ಕನ್ನಡ ಭಾಷೆಯ ರಸೀದಿಗಳನ್ನು ನೀಡಬೇಕು. ಪಟ್ಟಣದ ಕೆಲ ವರ್ತಕರು ನಿಯಮ ಉಲ್ಲಂಘಿಸಿ ಕನ್ನಡೇತರ ಭಾಷೆಯ ನಾಮಫಲಕ ಅಳವಡಿಸಿದ್ದಾರೆ. ಕಿರಾಣಿ, ಬಟ್ಟೆ ಇತರೆ ವರ್ತಕರು ಗ್ರಾಹಕರಿಗೆ ತಿಳಿಯದ ಹಿಂದಿ ಇತರೆ ಭಾಷೆಯಲ್ಲಿ ಬರೆದುಕೊಡುವುದನ್ನು ತಪ್ಪಿಸಿ ಕಡ್ಡಾಯವಾಗಿ ಕನ್ನಡದಲ್ಲಿ ಬರೆದ ಪಟ್ಟಿ, ರಸೀದಿ ಒದಗಿಸಬೇಕು. ಕನ್ನಡಪರ ಮೂರು ಬೇಡಿಕೆಗಳನ್ನು ನ.1ರೊಳಗಾಗಿ ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪದಾಧಿಕಾರಿಗಳಾದ ಸಂತೋಷ್, ಬಿ.ರಮೇಶ, ಎಂ.ಶಿವಪ್ರಕಾಶ್, ಹುಲಿಗೆಮ್ಮ, ಎನ್.ಗಂಗಮ್ಮ, ಕೆ.ಈರಮ್ಮ, ರೇಣುಕಮ್ಮ, ವೈ.ಯಲ್ಲಪ್ಪ, ಎ.ಪ್ರವೀಣ, ಸಂತೋಷ್‌ಕುಮಾರ್ ಇತರರಿದ್ದರು.