ಟ್ರಾೃಕ್ಟರ್ ಡಿಕ್ಕಿ: ಡೆಲಿವರಿ ಬಾಯ್ ಸಾವು

accident-15
Published on

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ ಟ್ರಾೃಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಫುಡ್ ಡೆಲಿವರಿ ಬಾಯ್ ಮೃತಪಟ್ಟಿದ್ದಾನೆ.


ಕಾಡುಗೋಡಿ ನಿವಾಸಿ ಫಕೀರ್ ಅಹ್ಮದ್(೨೮) ಮೃತ ಫುಡ್ ಡೆಲಿವರಿ ಬಾಯ್. ಅಸ್ಸಾಂ ಮೂಲದ ಫಕೀರ್ ಅಹ್ಮದ್ ಎರಡು ವರ್ಷಗಳಿಂದ ನಗರದ ಕಾಡುಗೋಡಿಯಲ್ಲಿ ವಾಸವಾಗಿದ್ದು, ಫುಡ್‌ಡೆಲವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಶುಕ್ರವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಪಟ್ಟಂದೂರು ಮೆಟ್ರೋ ನಿಲ್ದಾಣದ ಮಾರ್ಗವಾಗಿ ವೈಟ್‌ಫೀಲ್ಡ್ ಕಡೆ ಹೋಗುವಾಗ ಹಿಂದಿನಿಂದ ಬಂದ ಟ್ರಾೃಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಬೈಕ್ ಸವಾರ ಫಕೀರ್ ಅಹ್ಮದ್‌ಗೆ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ. ಟ್ರಾೃಕ್ಟರ್ ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈಟ್‌ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net