ತಾಜಾ ಆಹಾರ ಕಂಪನಿಯಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು| Toxic gas leak

Suicide
Published on

Toxic gas leak: ಗುಜರಾತ್‌ನ ಖಂಭತ್‌ನ ಸೋಖ್ಡಾದಲ್ಲಿರುವ ತಾಜಾ ಆಹಾರ ಕಂಪನಿಯೊಂದ ಎಫ್ಲುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್ (ಇಟಿಪಿ) ಟ್ಯಾಂಕ್ ಒಳಗೆ ವಿಷಕಾರಿ ಅನಿಲ ಸೋರಿಕೆಯಿಂದ ದುರಂತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಮೃತಪಟ್ಟು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಶುಕ್ರವಾರ (ಆಗಸ್ಟ್ 22) ವರದಿಯಾಗಿದೆ.

ನಿನ್ನೆ ರಾತ್ರಿ ಸುಮಾರು 9.30ರ ವೇಳೆಗೆ ಟ್ಯಾಂಕ್​​ಗೆ ಪ್ರವೇಶಿಸಿ ಅಡಚಣೆಯನ್ನು ತೆರವುಗೊಳಿಸುವಾ ದುರಂರ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಕಿಶನ್ ಬರಯ್ಯ(27), ಅರವಿಂದ್ ಬಾಬು ಮೃತಪಟ್ಟವರು.

ರಮೇಶ್‌ಭಾಯ್ ಭೋಯ್ ಮತ್ತು ಕಿಶನ್ ಪಡಿಯಾರ್ ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸಲು ಸತತವಾಗಿ ಪ್ರಯತ್ನಿಸಿದ್ದಾರೆ ಎನ್ನಲಾಗಿದ್ದು, ಅವರಿಬ್ಬರು ಅನಾರೋಗ್ಯದಿಂದ ಪ್ರಜ್ಞೆ ಕಳೆದುಕೊಂಡಿದ್ದಾರೆ. ಸದ್ಯ ಇಬ್ಬರೂ ಈಗ ಐಸಿಯುನಲ್ಲಿ ಜೀವಕ್ಕಾಗಿ ಹೋರಾಡುತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ರಮೇಶ್‌ಭಾಯ್ ಭೋಯ್, ಕಂಪನಿಯಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲ. ಅವರು ಟ್ಯಾಂಕ್ ಅನ್ನು ಒಮ್ಮೆ ಮಾತ್ರ ಸ್ವಚ್ಛಗೊಳಿಸುತ್ತಾರೆ, ಆದ್ದರಿಂದ ಯಾವುದೇ ಸಾಧನಗಳನ್ನು ನೀಡಲಾಗಿಲ್ಲ.ಸಾಮಾನ್ಯವಾಗಿ, ಹೊರಗಿನವರು ಈ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.

ಮೃತರ ಕುಟುಂಬಸ್ಥರು ಕಾರ್ಡಿಯಾಕ್ ಕೇರ್ ಆಸ್ಪತ್ರೆಯ ಹೊರಗೆ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಎರಡು ತಿಂಗಳ ಹಿಂದೆ ಸೂರತ್‌ನ ಮಂಗ್ರೋಲ್‌ನಲ್ಲಿ ನಡೆದ ಇದೇ ರೀತಿಯ ಅನಿಲ ದುರಂತದ ನಂತರ ಈ ಮಾರಕ ಸೋರಿಕೆ ಸಂಭವಿಸಿದೆ, ಆ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net