ಕದ್ದುಮುಚ್ಚಿ ಪ್ರವಾಸಕ್ಕೆ ಹೋಗಿದ್ದವರ ಜೀಪ್​ ಪ್ರಪಾತಕ್ಕೆ ಉರುಳಿತು...

Zeep
Published on

ಕಳಸ/ಜಯಪುರ: ಲಾಕ್​ಡೌನ್ ಕಾರಣ ಪ್ರವಾಸಿ ಸ್ಥಳಗಳಿಗೆ ಪ್ರವೇಶ ನಿಷೇಧಿಸಿದ್ದರೂ ಕದ್ದುಮುಚ್ಚಿ ಕ್ಯಾತನಮಕ್ಕಿ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರ ಜೀಪು 300 ಅಡಿ ಆಳದ ಪ್ರಪಾತಕ್ಕೆ ಉರುಳಿದೆ. ಜೀಪ್​ನಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣಾಪಾಯ ತಪ್ಪಿದೆ.

ಶನಿವಾರ ಕ್ಯಾತನಮಕ್ಕಿಗೆ ಕೊಗ್ರೆ- ಮೆಣಸಿನಹಾಡ್ಯ ಮಾರ್ಗವಾಗಿ ಸುಮಾರು 7 ವಾಹನಗಳಲ್ಲಿ ಬಂದಿದ್ದವರು ಮೆಣಸಿನಹಾಡ್ಯ ಬೆಟ್ಟದ ತುದಿಯಲ್ಲಿ ಜೀಪ್ ನಿಲ್ಲಿಸಿ ಸೆಲ್ಪಿ ತೆಗೆಯುವಾಗ ಗೇರ್ ಸ್ಲಿಪ್ ಆಗಿ ಜೀಪ್ ಪ್ರಪಾತಕೆ್ಕೆ ಉರುಳಿದೆ. ಜೀಪ್ ಮೇಲೆತ್ತಲು ಸಾಧ್ಯವಾಗದಷ್ಟು ಆಳವಾದ ಕಂದಕಕ್ಕೆ ಬಿದ್ದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ಯಾತನಮಕ್ಕಿಗೆ ಕೆಲವರು ಬಂದಿದ್ದಾರೆಂಬ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ್ದಾಗ 17 ಜನರಿದ್ದರು. ಅವರಿಗೆ ದಂಡ ಹಾಕಿದ್ದೇವೆ ಎಂದು ಕಳಸ ಠಾಣಾಧಿಕಾರಿ ಮಂಜಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net