VIDEO| ಪ್ರವಾಸಿಗ, ದೋಣಿ ನಡೆಸುವವನ ನಡುವೆ ಕ್ಷುಲ್ಲಕ ಕಾರಣಕ್ಕೆ ಬಡಿದಾಟ

Boatman Fight
Published on

ಡೆಹ್ರಾಡೂನ್​: ಕ್ಷುಲ್ಲಕ ಕಾರಣಕ್ಕೆ ಪ್ರವಾಸಿಗ ಹಾಗೂ ದೋಣಿ ನಡೆಸುವವರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿರುವ ಘಟನೆ ಉತ್ತರಾಖಂಡದ ನೈನಿತಾಲ್​ನಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಉತ್ತರಪ್ರದೇಶ ಮೂಲದ ಪ್ರವಾಸಿಗ ಆಸಿಫ್​ ಎಂಬುವವರು ಹಂಭೀರವಾಗಿ ಗಾಯಗೊಂಡಿದ್ಧಾರೆ ಎಂದು ವರದಿಯಾಗಿದೆ.

ಘಟನೆಯ ಹಿನ್ನಲೆ?

ಉತ್ತರಪ್ರದೇಶ ಮೂಲದ ಆಸಿಫ್​ ಹಾಗೂ ಕುಟುಂಬಸ್ಥರು ಪ್ರವಾಸಕ್ಕೆಂದು ಉತ್ತರಾಖಂಡದ ನೈನಿತಾಲ್​ಗೆ ಬಂದಿದ್ದರು. ಈ ವೇಳೆ ಮಲ್ಲಿತಾಲ್​ ಸರೋವರವನ್ನು ವೀಕ್ಷಿಸಲು ಎರಡು ದೋಣಿಗಳನ್ನು ಬಾಡಿಗೆಗೆ ಪಡೆದಿದ್ದಾರೆ. ದೋಣಿಯಲ್ಲಿ ತೆರಳುವಾಗ ಮುಂಬದಿ ಇದ್ದ ದೋಣಿಯನ್ನು ಹಿಂಬದಿ ಬರುತ್ತಿದ್ದ ಮತ್ತೊಂದು ದೋಣಿ ಹಿಂದಿಕ್ಕಿದೆ.

ಇದರಿಂದ ಕೋಪಗೊಂಡ ಆಸಿಫ್​ ದೋಣಿ ನಡೆಸುವವರಿಗೆ ತಮ್ಮನ್ನು ಹಿಂಬಾಲಿಸುವಂತೆ ಹೇಳಿದ್ದಾರೆ. ಇದಾದ ಕೆಲ ಕ್ಷಣಗಳ ಬಳಿಕ ತಮ್ಮ ದೋಣಿಯನ್ನು ಹಿಂದಿಕ್ಕಿದ್ದಕ್ಕಾಗಿ ತೀವ್ರವಾಗಿ ಸಿಟ್ಟುಗೊಂಡ ಆಸಿಫ್​ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ಧಾರೆ. ಇದರಿಂದ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರವಾಸಿಗನ ಮೇಲೆ ದೋಣಿ ನಡೆಸುವವರು ಹಲ್ಲೆ ನಡೆಸಿದ್ಧಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ದಡದಲ್ಲಿದ್ದ ಸ್ಥಳೀಯರು ಪರಿಸ್ಥಿತಿಯನ್ನು ತಿಳಿಸಿಗೊಳಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net