ಧಾರಾಕಾರ ಮಳೆ, ಸಿಡಿಲಿಗೆ ಯುವಕ ಬಲಿ

rakesh death
ಮೃತ ಯುವಕ ಹರಮಘಟ್ಟದ ರಾಕೇಶ್.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು ಶಿವಮೊಗ್ಗ ತಾಲೂಕಿನ ಹರಮಘಟ್ಟದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದಾನೆ. ಇದರೊಂದಿಗೆ ಜಿಲ್ಲೆಯಲ್ಲಿ ಮಳೆಗೆ ಎರಡನೇ ಬಲಿಯಾಗಿದೆ.

ಹರಮಘಟ್ಟದ ರಾಕೇಶ್ (25) ಮೃತ ಯುವಕ. ಶುಕ್ರವಾರ ಸಂಜೆ ತೋಟಕ್ಕೆ ಹೋಗಿದ್ದ ರಾಕೇಶ್ ವಾಪಸ್ ಮನೆಗೆ ಬರುವಾಗ ಗುಡುಗು, ಸಿಡಿಲಿನ ಆರ್ಭಟ ಶುರುವಾಗಿದ್ದು ಮಳೆ ಜೋರಾಗಿದ್ದ ಕಾರಣ ಮರದ ಕೆಳಗೆ ನಿಂತಿದ್ದ. ಈ ವೇಳೆ ಸಿಡಿದು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲ ದಿನಗಳ ಹಿಂದಷ್ಟೇ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಬಳಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು ಅದರಲ್ಲಿ ಇಬ್ಬರು ರಾಕೇಶ್ ಸಹೋದರರೇ ಆಗಿದ್ದರು.
ಶಿವಮೊಗ್ಗ ನಗರ ಮಾತ್ರವಲ್ಲದೆ, ಗ್ರಾಮಾಂತರ, ಸಾಗರ, ಭದ್ರಾವತಿ, ಶಿಕಾರಿಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಇದರಿಂದ ಬೇಸಿಗೆ ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಜಿಲ್ಲೆಗೆ ತಣ್ಣನೆಯ ವಾತಾವರಣ ನೆಲೆಸುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net