ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಟೂಟಿ ಫ್ರೂಟಿ ಐಸ್​ಕ್ರೀಂ! | Recipe

untitled-design-2025-08-25t175752776-68ac56d3d358d (1)
Published on

Recipe : ಇಂದಿನ ದಿನಗಳಲ್ಲಿ ನಾನಾ ರೀತಿಯ ಐಸ್​ಕ್ರೀಂಗಳಿಗೆ ಜನರು ಮಾರು ಹೋಗಿದ್ದಾರೆ. ಹಾಗೆಯೇ ಅನೇಕ ರೀತಿಯ ಫ್ಲೇವರ್​ಗಳಿಂದ ಐಸ್​ಕ್ರೀಂ ಪಾರ್ಲರ್​ಗಳು ಜನರನ್ನು ಆಕರ್ಷಿಸುತ್ತವೆ. ಅಂದಹಾಗೇ ಕೆಲವರು ಹೊರಗಿನ ಆಹಾರವನ್ನು ಸೇವಿಸಲು ಇಷ್ಟಪಡದವರು ಕೆಲವೇ ಪದಾರ್ಥಗಳಲ್ಲಿ ಇಂದೇ ಮನೆಯಲ್ಲಿ ತಯಾರಿಸಿ ರುಚಿಕರವಾದ  ಟೂಟಿ ಫ್ರೂಟಿ ಐಸ್‌ಕ್ರೀಂ.ಈ  ರೆಸಿಪಿಯು ರುಚಿಕರವಾಗಿರುತ್ತದೆ ಮತ್ತು ಐಸ್‌ಕ್ರೀಂ ಮೇಕರ್ ಇಲ್ಲದೆಯೂ ತಯಾರಿಸಬಹುದಾಗಿದೆ.

ಬೇಕಾಗುವ ಪದಾರ್ಥಗಳು

* 2 ಕಪ್‌ ಹಾಲಿನ ಕೆನೆ

* 1 ಕಪ್‌ ಫುಲ್ ಕ್ರೀಮ್ ಹಾಲು

* 3/4 ಕಪ್‌ ಸಕ್ಕರೆ

* 1 ಚಮಚ ವೆನಿಲ್ಲಾ ಎಸೆನ್ಸ್‌

* 1/2 ಕಪ್‌ ಟೂಟಿ ಫ್ರೂಟಿ (ಒಣಗಿದ ಹಣ್ಣುಗಳು)

* ಒಂದು ಚಿಟಿಕೆ ಉಪ್ಪು

* ಕೆಂಪು ಅಥವಾ ಹಳದಿ ಫುಡ್ ಕಲರ್ (ಬೇಕಾದಲ್ಲಿ)

ಮಾಡುವ ವಿಧಾನ

ಮೊದಲು ಒಂದು ಬಟ್ಟಲಿಗೆ ಹಾಲಿನ ಕೆನೆ, ಹಾಲು, ಸಕ್ಕರೆ, ವೆನಿಲ್ಲಾ ಎಸೆನ್ಸ್​, ಹಾಗೂ ಒಂದು ಚಿಟಿಕೆ ಉಪ್ಪು ಬೆರೆಸಿ ಚೆನ್ನಾಗಿ ಮಿಕ್ಸ್​ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗುವ ಹಾಗೆ ಮಿಕ್ಸ್​ ಮಾಡಬೇಕು. ನಂತರ, ಅದಕ್ಕೆ ಐಚ್ಚಿಕವಾಗಿ ಫುಡ್​ ಕಲರ್​ ಬೆರೆಸಿ. ಈಗ ಆ ಮಿಶ್ರಣಕ್ಕೆ ಟೂಟಿ ಫ್ರೂಟಿ ತುಂಡುಗಳನ್ನು ಸೇರಿಸಿ. ಈಗ ಐಸ್​ಕ್ರೀಂ ಮೇಕರ್​ ಅಥವಾ ಡಬ್ಬದಲ್ಲಿ ಈ ಮಿಶ್ರಣವನ್ನು ಸುರಿದು 1-2 ಗಂಟೆಗಳ ತನಕ ಫ್ರಿಜ್​ನಲ್ಲಿಟ್ಟು, 40 ನಿಮಿಷಗಳಿಗೊಮ್ಮೆ ಚಮಚದಲ್ಲಿ ಕಲಸಿರಿ ಹೀಗೆ 2 ಬಾರಿ ಮಾಡಿ ನಂತರ ಕೂಲ್​ ಆಗಲು ಬಿಡಿ. ಇದಾದ ಬಳಿಕ ರುಚಿಕರವಾದ ಟೂಟಿ ಫ್ರೂಟಿ ಐಸ್​ಕ್ರೀಂ ಸೇವಿಸಿ..

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net