ನಾಳೆ ಪೋಲಿಯೋ ದಿನ

Polio day
Published on

ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನವಾದ ಭಾನುವಾರ ರಾಜ್ಯದಲ್ಲಿ 0-5 ವರ್ಷದೊಳಗಿನ 64,65,561 ಮಕ್ಕಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದೆ.

ಕಾರ್ಯಕ್ರಮಕ್ಕೆ 33,021 ಬೂತ್​ಗಳು, 46,620 ತಂಡಗಳು, 1,9,554 ಕಾರ್ಯಕರ್ತರು, 7,105 ಮೇಲ್ವಿಚಾರಕರು, 977 ಸಂಚಾರಿ ತಂಡಗಳು ಹಾಗೂ 2,111 ಟ್ರಾನ್ಸಿಟ್ ತಂಡಗಳು ಸಜ್ಜಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net