ಹವಾಮಾನ ವೈಪರೀತ್ಯಕ್ಕೆ ಟೊಮ್ಯಾಟೊ ಇಳುವರಿ ಕುಂಠಿತ

tomato que
Published on

ಕೋಲಾರ: ಹವಾಮಾನ ವೈಪರೀತ್ಯದಿಂದ ಟೊಮ್ಯಾಟೊ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮ್ಯಾಟೊ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿಯಲ್ಲಿ ಟೊಮಾಟೊ ಸೇರಿ ಇತರ ತರಕಾರಿ ವಹಿವಾಟು ಹೆಚ್ಚಿದೆ. ಪ್ರಸ್ತುತವಾಗಿ ಇನ್ನಿತರ ತರಕಾರಿಗಳಿಗಿಂತ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಸುಗ್ಗಿ ಪ್ರಾರಂಭವಾಗಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ಆವಕ ತೀರ ಕಡಿಮೆಯಾಗಿದೆ. ಸುಗ್ಗಿಯಲ್ಲಿ ಪ್ರತಿದಿನ 25,000 ಕ್ವಿಂಟಾಲ್​ಗೂ ಆಧಿಕ ಆವಕ ಆಗುತ್ತದೆ, ಆದರೆ ಇಳುವರಿ ಕಡಿಮೆಯಾಗಿರುವುದರಿಂದ ಕೇವಲ 10,500 ಕ್ವಿಂಟಾಲ್​ ಆವಕ ಆಗುತ್ತಿದೆ. ಇದರಿಂದಾಗಿ 15 ಕೆಜಿ ಬಾಕ್ಸ್​ 500ಯಿಂದ 700 ರೂ. ವರೆಗೆ ಮಾರಾಟವಾಗುತ್ತಿದ್ದು, ಇದೇ ದರವು ಸುಗ್ಗಿ ಕೊನೆಯ ತನಕ ಮುಂದುವರಿಯಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.
ತೀವ್ರ ಬರದಿಂದ ಟೊಮ್ಯಾಟೊ ಬೆಳೆದವರ ಸಂಖ್ಯೆ ಕಡಿಮೆಯಾಗಿದೆ. ಕೆರೆಗಳಲ್ಲಿ ನೀರು ಬತ್ತಿದ ಕಾರಣ ಕೊಳವೆಬಾವಿಗಳಲ್ಲೂ ಸಹ ನೀರಿನ ಪ್ರಮಾಣ ಣಿಸಿದ್ದರಿಂದ ಟೊಮ್ಯಾಟೊ ನಾಟಿ ಮಾಡುವುದು ಕುಸಿದಿದೆ. ಬರಗಾಲದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿ ಬೆಳೆ ಸಂರಕ್ಷಣೆ ಮಾಡುವುದು ಬೆಳೆಗಾರರಿಗೆ ಸವಾಲಿನ ಕೆಲಸವಾಗಿತ್ತು. ಆಗ ನೀರಿನ ಕೊರತೆ ಇತ್ತು ಎಂಬುದು ಬಿಟ್ಟರೆ ರೋಗಗಳ ಬಾಧೆ ಅಷ್ಟೇನು ಇರಲಿಲ್ಲ. ಆದರೆ ನಿರೀತಮಟ್ಟದಲ್ಲಿ ಇಳುವರಿ ಸಿಗುತ್ತಿರಲಿಲ್ಲ. ಈಗ ಜಿಲ್ಲೆಯಲ್ಲಿ 10&15 ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಟೊಮ್ಯಾಟೊ ಬೆಳೆ ಸಂರಸುವುದು ಕಷ್ಟವಾಗುತ್ತಿದೆ. ಮೋಡ ಮುಸುಕಿನ ವಾತಾವರಣದಿಂದ ಬೆಳೆಗೆ ಅಂಗಮಾರಿ, ಎಲೆ ಮುದುಡು ರೋಗ, ಕಾಂಡ ಕೋರಕ, ನುಸಿ ರೋಗ ಬಾಧೆ ಬಾಧಿಸುತ್ತಿದೆ. ಎಷ್ಟೇ ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಲಭ್ಯವಿರುವ ಸಲನ್ನು ಕೊಯ್ಲು ಮಾಡಿಕೊಂಡು ಉಳಿದದ್ದನ್ನು ಹಾಗೆಯೇ ಬಿಡುವ ಪರಿಸ್ಥಿತಿ ಎದುರಾಗಿದೆ.

ವಾಣಿಜ್ಯ ಬೆಳೆ ಟೊಮ್ಯಾಟೊ
ಜಿಲ್ಲೆಯಲ್ಲಿ ಒಟ್ಟು 96,805 ಹೆಕ್ಟೇರ್​ ತೋಟಗಾರಿಕೆ ಪ್ರದೇಶವಿದ್ದು, ಆ ಪೈಕಿ 48,629 ಹೆಕ್ಟೇರ್​ ಪ್ರದೇಶದಲ್ಲಿ ಹಣ್ಣಿನ ಬೆಳೆಗಳನ್ನು ಹಾಗೂ 40,571 ಹೆಕ್ಟೇರ್​ ಪ್ರದೇಶದಲ್ಲಿ ತರಕಾರಿ ಬೆಳೆ ಬೆಳೆಯುತ್ತಾರೆ. ಜಿಲ್ಲೆಯ ಬಹುತೇಕ ರೈತರು ಟೊಮ್ಯಾಟೊ ಬೆಳೆಯನ್ನು ವಾಣಿಜ್ಯ ಬೆಳೆಯನ್ನಾಗಿಸಿಕೊಂಡಿದ್ದು, ಸುಗ್ಗಿ ಹೊರತುಪಡಿಸಿ ಬೇರೆ ಸಮಯದಲ್ಲೂ ಟೊಮ್ಯಾಟೊ ಬೆಳೆಯುವ ರೈತರಿದ್ದಾರೆ. ೆಬ್ರವರಿ, ಮಾರ್ಚ್​ನಲ್ಲಿ ಟೊಮ್ಯಾಟೊ ಸಸಿ ನಾಟಿ ಮಾಡಿದ್ದರೆ ಮೇನಲ್ಲಿ ಸಲು ಕೊಯ್ಲಿಗೆ ಬರುತ್ತಿತ್ತು. ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣ ನಾಟಿ ಮಾಡಿದ ಸಸಿಗಳನ್ನು ರಕ್ಷಣೆ ಮಾಡಲಾಗದೆ ಬೆಳೆಗಾರರು ಕಂಗಾಲಾಗಿದ್ದ ಪರಿಣಾಮ ಆವಕ ಕಡಿಮೆಯಾಗಿದೆ. ಅಂತೆಯೇ, ಸ್ಥಿತಿವಂತ ರೈತರು ನೇಟ್​ ಹೌಸ್​ ಹಾಗೂ ಪಾಲಿ ಹೌಸ್​ನಲ್ಲಿ ಬೆಳೆ ತೆಗೆದಿರುವ ಕಾರಣ ಲಾಭ ಸಿಗುತ್ತಿದೆ.

  • ಬೆಳೆಯ ಮೇಲೆ ಪರಿಣಾಮ
    ಸತತವಾಗಿ ಮೋಡ ಮುಸುಕಿನ ವಾತಾವರಣ ಇರುವುದರಿಂದ ಇದು ಟೊಮ್ಯಾಟೊ ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ. ಬಿಳಿ ನೋಣ, ಅಂಗಮಾರಿ ರೋಗ ಹರಡುವ ಲಕ್ಷಣಗಳು ಹೆಚ್ಚಾಗಿದ್ದು, ರೋಗ ನಿಯಂತ್ರಣ ಮಾಡುವುದು ರೈತರಿಗೆ ಸವಾಲಾಗಿದೆ. ಬಿಸಿಲಿನ ವಾತಾರಣ ಇದ್ದರೆ ಹಲವು ದಿನಗಳು ಇಳುವರಿ ಲಭ್ಯವಾಗುತ್ತದೆ. ಮೋಡ ಮುಸುಕಿನ ವಾತಾವರಣ ಇದ್ದರೆ ಇದ್ದ ಸಲೂ ಬಹಳ ದಿನಗಳು ನಿಲ್ಲುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net