ಟೊಮ್ಯಾಟೋದಲ್ಲಿ ಜಗನ್ನಾಥನ ದರ್ಶನ! ದೇವರನ್ನು ಕಣ್ತುಂಬಿಕೊಳ್ಳಲು ಬಂದು ಎಂಥಾ ಪವಾಡವೆಂದ ಜನರು

Jagannath
Published on

ಕಟಕ್​: ಸ್ವಾಮಿ ಜಗನ್ನಾಥನ ಮುಖದ ಮಾದರಿಯ ಟೊಮ್ಯಾಟೋ ಒಂದು ಒಡಿಶಾದ ಕಟಕ್​ನಲ್ಲಿ ಶುಕ್ರವಾರ (ಸೆ.20) ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರನ್ನು ಹುಬ್ಬೇರಿಸಿದೆ.

ಈ ಅಪರೂಪದ ಟೊಮ್ಯಾಟೋ ಕಟಕ್​ನ ಗೋಪಾಲ್​ಪುರದಲ್ಲಿ ಪತ್ತೆಯಾಗಿದೆ. ವರದಿಗಳ ಪ್ರಕಾರ, ಜಗನ್ನಾಥನ ಮಾದರಿಯ ಟೊಮ್ಯಾಟೋವನ್ನು ಗೋಪಾಲ್‌ಪುರದ ನಿವಾಸಿ ಪುಥುಲ್ ಭಟ್ಟಾಚಾರ್ಯ ಎಂಬ ಯುವಕ ಮೊದಲು ನೋಡಿದನು ಎಂದು ವರದಿಯಾಗಿದೆ.

ಗೋಪಾಲ್‌ಪುರದಲ್ಲಿರುವ ಪುತುಲ್ ಭಟ್ಟಾಚಾರ್ಯ ಅವರ ಮನೆಯಲ್ಲಿ ಇಂತಹ ಅಪರೂಪದ ದೃಶ್ಯ ಕಂಡುಬಂದಿದೆ. ನಿನ್ನೆ ಪುತುಲ್, ಚಿಲ್ಲಿ ಪನೀರ್ ಮಾಡಲು ಕೆಲವು ಟೊಮ್ಯಾಟೋಗಳನ್ನು ಖರೀದಿಸಿ ಮನಗೆ ತಂದಿದ್ದರು. ಈ ವೇಳೆ ಒಂದು ಟೊಮ್ಯಾಟೋದಲ್ಲಿ ಸ್ವಾಮಿ ಜಗನ್ನಾಥನ ಮುಖದ ಮಾದರಿಯನ್ನು ನೋಡಿದ್ದಾರೆ.

ಇದಾದ ಬಳಿಕ ಪುತುಲ್​, ತಮ್ಮ ಕುಟುಂಬ ಸದಸ್ಯರನ್ನು ಕರೆದರು ಟೊಮ್ಯಾಟೋವನ್ನು ತೋರಿಸಿದ್ದಾರೆ. ಈ ವೇಳೆ ಟೊಮ್ಯಾಟೋವನ್ನು ಬೆರಗುಗಣ್ಣಿನಿಂದ ನೋಡಿದ ಪುತುಲ್​ ಕುಟುಂಬ ಪೂಜಾ ಕೊಠಡಿಗೆ ಜಮಾಯಿಸಿ, ಟೊಮ್ಯಾಟೋವನ್ನು ಇಟ್ಟು, ಹೂ ಹಾಕಿ ಪೂಜೆ ಸಲ್ಲಿಸಿದ್ದಾರೆ.

ಇದೀಗ ಪುತುಲ್​ ಅವರ ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣ ನೆಲೆಸಿದೆ. ಅಕ್ಕಪಕ್ಕದ ಮನೆಯವರಿಗೂ ಇದು ಗೊತ್ತಾಗಿ ಟೊಮ್ಯಾಟೋ ನೋಡಲು ತಂಡೋಪತಂಡವಾಗಿ ಬರುತ್ತಿದ್ದಾರೆ. ಅನೇಕ ಮಂದಿ ಪೂಜೆಯಲ್ಲಿ ಪಾಲ್ಗೊಂಡು ಜಗನ್ನಾಥನನ್ನು ಸ್ಮರಿಸಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net