ಟೊಮ್ಯಾಟೊ ಪ್ರಿಯರಿಗೆ ಶಾಕ್‌! ಗಗನಕ್ಕೇರಿತು ಬೆಲೆ...

K HALLI TOMATO 29 (1)
Published on

ನವದೆಹಲಿ: ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಟೊಮ್ಯಾಟೊ ಬೆಲೆ ಬಹುತೇಕ ನಗರಗಳಲ್ಲಿ 60 ರಿಂದ 70 ರೂಪಾಯಿಗೆ ದಿಢೀರನೆ ಏರಿಕೆಯಾಗಿದೆ. ಕೆ.ಜಿಯೊಂದಕ್ಕೆ 10-15 ರೂಪಾಯಿಗೆ ಸಿಗುತ್ತಿದ್ದ ಟೊಮ್ಯಾಟೊ ಬೆಲೆ ಛಂಗನೆ ಜಿಗಿದಿದೆ.

ಟೊಮ್ಯಾಟೊ ಬೆಳೆ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಇದು ಮಾರುಕಟ್ಟೆಗೆ ಬರುವ ಮೊದಲೇ ಹಾಳಾಗುತ್ತಿರುವುದು ಇದಕ್ಕೆ ಕಾರಣ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಗುರುಗ್ರಾಮ, ಗ್ಯಾಂಗ್ ಟಾಕ್, ಸಿಲಿಗುರಿ, ರಾಯ್ ಪುರ್ ಗಳಲ್ಲಿ 70 ರೂಪಾಯಿಗಳಿಗೆ ಏರಿಕೆಯಾಗಿದ್ದು, ಗೋರಖ್‌ಪುರ, ಕೋಟಾ ಮತ್ತು ದಿಮಪುರ್‌ಗಳಲ್ಲಿ ಕೆ.ಜಿಗೆ 80ರೂಪಾಯಿ ಆಗಿದೆ. ಇದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊಂಚ ಬೆಲೆ ಕಡಿಮೆ ಇದ್ದು, 46-50 ರೂಪಾಯಿ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ ಕೆ.ಜಿಗೆ 37 ರೂಪಾಯಿಯಿದ್ದರೆ ಚೆನ್ನೈಯಲ್ಲಿ 40 ರೂಪಾಯಿ ಹೆಚ್ಚಾಗಿದೆ.

ಸಾಮಾನ್ಯವಾಗಿ ಜುಲೈಯಿಂದ ಸೆಪ್ಟೆಂಬರ್‌ವರೆಗೆ ಇದರ ಬೆಲೆ ತೀವ್ರ ಮಳೆಯಿರುವಾಗ ಹೆಚ್ಚಾಗುತ್ತದೆ. ಈಗಲೂ ಅನೇಕ ಕಡೆಗಳಲ್ಲಿ ಈ ಬೆಳೆಯ ಪ್ರಮಾಣ ಕಡಿಮೆಯಾಗಿರುವ ಜತೆಗೆ, ಕೊಳೆತು ಹೋಗುವುದೂ ಹೆಚ್ಚಾಗುತ್ತಿದೆ. ಆದ್ದರಿಂದ ಅನಿವಾರ್ಯವಾಗಿ ಈ ಬಾರಿಯೂ ಬೆಲೆ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ ಸಚಿವರು. ಮಾರುಕಟ್ಟೆಗೆ ಪೂರೈಕೆ ಹೆಚ್ಚಾದಾಗ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂಬ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net