VIDEO | ಬೆಲೆ ಏರಿಕೆ ಬೆನ್ನಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಟೊಮ್ಯಾಟೋ ಐಸ್ ಕ್ರೀಮ್...

tomato ice
Published on

ನವದೆಹಲಿ: ಅನೇಕ ರೆಸ್ಟೋರೆಂಟ್ ಮಾಲೀಕರು ಮತ್ತು ಬೀದಿ ವ್ಯಾಪಾರಿಗಳು ವಿವಿಧ ಪಾಕವಿಧಾನಗಳನ್ನು ಪರಿಚಯಿಸುತ್ತಿದ್ದಾರೆ. ಇತ್ತೀಚಿಗೆ ವ್ಯಕ್ತಿಯೊಬ್ಬ ಟೊಮ್ಯಾಟೋ ಐಸ್ ಕ್ರೀಂ ತಯಾರಿಸುತ್ತಿರುವುದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಟೊಮ್ಯಾಟೋ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜನಸಾಮಾನ್ಯರು ಟೊಮ್ಯಾಟೋ ಮರೆತು ಹಲವು ದಿನಗಳಾಗಿವೆ. ನೀವು ಟೊಮ್ಯಾಟೋ ಖರೀದಿಸಿದರೂ, ತುಂಬಾ ಮಿತವಾಗಿ ಬಳಕೆ ಮಾಡುತ್ತಿದ್ದಾರೆ. ಒಂದೆಡೆ ಟೊಮ್ಯಾಟೋ ಕಳ್ಳತನ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ಹೊಲದ ರಕ್ಷಣೆಗೆ ಮುಂದಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗುತ್ತಿದೆ. ಮಕ್ಕಳ ಹುಟ್ಟುಹಬ್ಬದಂದು ಟೊಮ್ಯಾಟೋಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಟೊಮ್ಯಾಟೋಗಳ ಮೇಲಿನ ವೀಡಿಯೊಗಳು ಇಂಟರ್ನೆಟ್​​ನಲ್ಲಿ ವೈರಲ್​ ಆಗಿರುವ ಬೆನ್ನಲ್ಲೇ, ಈ ಮಧ್ಯೆ ಹೊಸ ವಿಡಿಯೋ ಬಂದಿದೆ. ವ್ಯಕ್ತಿಯೊಬ್ಬ ಟೊಮ್ಯಾಟೋ ಐಸ್ ಕ್ರೀಮ್ ತಯಾರಿಸುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಹುಬ್ಬೆರಿಸಿದ್ದಾರೆ.

ಟೊಮ್ಯಾಟೋ ಐಸ್ ಕ್ರೀಮ್ ವೀಡಿಯೊವನ್ನು ನೋಡಿ ನೆಟಿಜನ್‌ಗಳು ಶಾಕ್ ಆಗಿದ್ದಾರೆ. ಈ ಹೊಸ ಕಾಂಬಿನೇಷನ್ ಹೇಗಿರುತ್ತೆ?. ಇದೀಗ ಭಾರತದಲ್ಲೇ ಅತ್ಯಂತ ದುಬಾರಿ ಐಸ್ ಕ್ರೀಂ ಇದಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ಕಾಂಬಿನೇಷನನ್ನು ಹಲವರು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net