ಟೊಮ್ಯಾಟೊಗೆ ಬಿಂಗಿ ರೋಗ ಕಾಟ

tomato bingi
ಶ್ರೀನಿವಾಸಪುರ ತಾಲೂಕಿನ ರೈತರೊಬ್ಬರು ಬೆಳೆದ ಟೊಮ್ಯಾಟೊಗೆ ಎಲೆ ಮುದುಡು ರೋಗ ತಗುಲಿರುವುದು.
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಮಳೆಯ ಅಭಾವ ಇದ್ದರೂ ಸಹ, ಲಭ್ಯವಿರುವ ಅಲ್ಪಸ್ವಲ್ಪ ನೀರಿಗೆ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ತಗಲುವ ರೋಗಳನ್ನು ನಿಯಂತ್ರಣ ಮಾಡುವುದು ದೊಡ್ಡ ಸವಾಲಾಗಿದೆ.

ಮಳೆ ಕೊರತೆ ನಡುವೆಯೂ ಲಾಂತರ ರೈತರು ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಪಪ್ಪಾಯ, ದಾಳಿಂಬೆ, ಆಲೂಗಡ್ಡೆ, ಸೀಬೆ, ಮಾವು ಸೇರಿ ಹಲವು ಬೆಳಗಳನ್ನು ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತದೊ ಇಲ್ಲವೊ ಎಂಬ ಗೊಂದಲದಲ್ಲಿ ಬೆಳೆ ತೆಗೆಯುವುದು ಜಿಲ್ಲೆಯ ರೈತರ ವಾಡಿಕೆಯಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ, ಇಳುವರಿಯಿಲ್ಲದೆ ಇರುವುದು ಬೇಸರವುಂಟು ಮಾಡಿದೆ.

ಟೊಮ್ಯಾಟೊ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಜೂನ್​, ಜುಲೈ, ಆಗಸ್ಟ್​ನಲ್ಲಿ ಸುಗ್ಗಿ ಇರುತ್ತದೆ. ಈಗಾಗಲೇ ನಾಟಿ ಮಾಡಿರುವ ಬೆಳೆಗೆ ಎಲೆ ಮುದುಡು ರೋಗ (ಬಿಂಗಿ) ವ್ಯಾಪಕವಾಗಿ ಹರಡಿದ್ದು, ರೈತರು ಲಾಂತರ ರೂ. ವೆಚ್ಚದ ಔಷಧ ಸಿಂಪಡಣೆ ಮಾಡಿದರೂ ಸಹ ರೋಗವು ಹತೋಟಿಗೆ ಬರಾದೆ ಇರುವುದು ಆತಂಕ ಉಂಟು ಮಾಡಿದೆ.

ನೀರಿನ ಕೊರತೆ, ವಿದ್ಯುತ್​ ಸಮಸ್ಯೆ, ಕೂಲಿ ಕಾರ್ಮಿಕರ ಕೊರತೆ ನಡುವೆಯು ಬೆಳೆ ಬೆಳೆಯುತ್ತಾರೆ. ಬೆಳೆ ನಿರ್ವಹಣೆಗೆ ರಸಗೊಬ್ಬರ, ಕೀಟನಾಶಕಗಳಿಗೆ ಲಾಂತರ ರೂ.ವೆಚ್ಚ ಮಾಡುತ್ತಾರೆ. ಈ ಬೆಳೆಗೆ ಎಲೆ ಮುದುಡು, ನಂಜು, ದುಂಡಾಣು, ಸೊರಗು ರೋಗ, ನುಸಿ ಹೀಗೆ ಹಲವು ರೋಗಗಳು ಬಾಧಿಸುತ್ತವೆ. ಎಷ್ಟೇ ಸುತ್ತು ಕೀಟನಾಶಕ ಸಿಂಪಡಿಸಿದರೂ ಸಹ ರೋಗ ಹತೋಟಿಗೆ ಬರದೆ ಸಂಶೋಧನೆಗಳಿಂದ ತಿಳಿಯಬೇಕಿದೆ. ಭೂಮಿಯಲ್ಲಿ ಪೋಷಕಾಂಶಗಳ ಕೊರತೆ, ಹವಾಮಾನದ ವೆಪರೀತ್ಯ, ಬಿತ್ತನೆ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಬೆಳೆಗೆ ರೋಗಗಳು ತಗಲುತ್ತಿದ್ದು, ರೆತರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

* 96.805 ಹೆ.ಪ್ರ. ತೋಟಗಾರಿಕೆ ಬೆಳೆ

ಜಿಲ್ಲೆಯಲ್ಲಿ ಒಟ್ಟು 96,805 ಹೆಕ್ಟೇರ್​ ತೋಟಗಾರಿಕೆ ಪ್ರದೇಶವಿದ್ದು, ಆ ಪೆಕಿ 48,629 ಹೆಕ್ಟೇರ್​ನಲ್ಲಿ ಹಣ್ಣು, 40,571 ಹೆಕ್ಟೇರ್​ನಲ್ಲಿ ತರಕಾರಿ ಬೆಳೆಯಲಾಗುತ್ತಿದ್ದು, ಬೆಳೆಗಾರರು ಸಾಲ ಸೋಲ ಮಾಡಿ ಲಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಕೆಗೆ ಬರುವ ಹಂತದಲ್ಲಿ ರೋಗ ಬಾಧೆಗೆ ತುತ್ತಾಗುತ್ತಿದೆ. ಇದರಿಂದಾಗಿ ರೆತರು ತಲೆ ಮೇಲೆ ಕೆಹೊತ್ತು ಕೂರುವಂತಾಗಿದೆ.

* ಸಿಗದ ಗುಣಮಟ್ಟದ ಔಷಧ

ಬಿಂಗಿ ರೋಗ ನಿಯಂತ್ರಣ ಸವಾಲಿನ ಕೆಲಸವಾಗಿದ್ದು, ಈ ಮಧ್ಯೆ ವಿವಿಧ ಔಷಧ ಕಂಪನಿಗಳ ಮಾರಾಟಗಾರರು ರೈತರ ತೋಟಗಳಿಗೆ ಭೇಟಿ ನೀಡಿ, ತಮ್ಮ ಔಷಧಗಳನ್ನು ಶಿಾರಸು ಮಾಡುತ್ತಿದ್ದಾರೆ. ಜತೆಗೆ ಇಂತಹದ್ದೇ ಅಂಗಡಿಗೆ ಹೋಗುವಂತೆಯು ಹೇಳುತ್ತಿರುವುದು ಕಂಡು ಬಂದಿದೆ. ಅದರಂತೆ ಔಷಧ ಖರೀದಿ ಮಾಡಿ ಸಿಂಪಡಣೆ ಮಾಡಿದರೆ, ಬೆಳಕಾಗುವಷ್ಟರಲ್ಲಿ ಮತ್ತೊಂದು ರೋಗ ಕಾಣಿಸಿಕೊಳ್ಳುತ್ತದೆ. ರೋಗಗಳ ನಿಯಂತ್ರಿಸುವ ಗುಣಮಟ್ಟದ ಔಷಧ ಸಿಗದೆ ಇರುವುದನ್ನೇ ಬಂಡವಾಳ ಮಾಡಿಕೊಂಡ ಕೆಲ ಔಷಧ ಮಾರಾಟಗಾರರು ಬಳಕೆಗೆ ಅನುಮತಿ ಇಲ್ಲದ ನಕಲಿ ಔಷಧ ಮಾರಾಟ ಮಾಡಿ ವಂಚಿಸುತ್ತಿರುವ ಆರೋಪ ಕೇಳಿ ಬಂದಿದೆ. ಇದಕ್ಕೆಲ್ಲ ಇಲಾಖಾಧಿಕಾರಿಗಳ ರ್ನಿಲಕ್ಷ$್ಯವೇ ಕಾರಣವಾಗಿದೆ.

* ಅಂತರ ಬೆಳೆ ಪದ್ಧತಿಯಿಂದ ರೋಗ ನಿಯಂತ್ರಣ

ಸಾಹೋ ತಳಿ ಟೊಮ್ಯಾಟೊ ಹೆಚ್ಚಾಗಿ ನಾಟಿ ಮಾಡುತ್ತಿದ್ದು, ಅದು ರೋಗ ನಿರೋಧಕ ಶಕ್ತಿ ಕಳೆದುಕೊಂಡಿದೆ, ಆ ತಳಿಗೆ ರೋಗ ತಡೆಯುವ ಶಕ್ತಿ ಇಲ್ಲವಾಗಿದೆ. ಇತರೆ ತಳಿಗೆಗಳಿಗೆ ಹರಡುವ ರೋಗಗಳನ್ನು ತಡೆಯಲು ಸಾಧರಣೆ ಕ್ರಮಗಳಿದ್ದು, ವರ್ಷದಲ್ಲಿ ಬೆಳೆ ಅಂತರ ಪದ್ಧತಿ ಅಳವಡಿಸಿಕೊಳ್ಳವುದು ಉತ್ತಮ ಎಂದು ತಜ್ಞರ ಅಭಿಪ್ರಾಯವಾಗಿದೆ.

ಕೋಟ್​..

ನರ್ಸರಿಯಿಂದ ಸಸಿಗಳನ್ನು ತಂದು ನಾಟಿ ಮಾಡಿದ ಕೆಲ ದಿನಗಳಿಗೆ ಬಿಂಗಿ ರೋಗ ಕಾಣಿಸಿಕೊಂಡಿದೆ. ಈ ಬಗ್ಗೆ ನರ್ಸರಿ ಮಾಲೀಕರನ್ನು ಕೇಳಿದರೆ ಬಿತ್ತನೆ ಬೀಜ ಸಮಸ್ಯೆಯೋ ಅಥವಾ ಇನ್ನೇನು ಎಂಬುದರ ಬಗ್ಗೆ ಹೇಳುವುದಿಲ್ಲ. ಔಷಧಗಳನ್ನು ಸಿಂಪಡಿಸಿ ಮತ್ತಷ್ಟು ನಷ್ಟಕ್ಕೆ ಒಳಗಾಗಬೇಕಿದೆ.

- ಚಂದ್ರಶೇಖರ್​, ಟೊಮ್ಯಾಟೊ ಬೆಳೆಗಾರ, ಕಿರುವಾರ

ಕೋಟ್​...

ಒಂದೇ ರೀತಿಯ ಬೆಳೆ ಬೆಳೆಯುವುದರಿಂದ ರೋಗಬಾಧೆ ಹೆಚ್ಚಾಗುತ್ತದೆ. ಇದನ್ನು ತಡೆಯಲು ಅಂತರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ನಿರ್ವಹಣೆ ಸಂದರ್ಭದಲ್ಲಿ ತಜ್ಞರ ಶಿಾರಸ್ಸಿನ ಮೇರೆಗೆ ಕೀಟನಾಶಕ ಸಿಂಪಡಿಸಿದರೆ ಉತ್ತಮ.

- ಡಾ.ಶಿವಾನಂದ ಹೊಂಗಲ, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net