ಸದ್ದಿಲ್ಲದೆ ಸಾಂಬಾರ್ ಹಂಚಿದ ಸಜ್ಜನ, ಇದು ಚಿತ್ರ ವಿ-ಚಿತ್ರ ಜಗತ್ತು

sudina 2
Published on

ನವದೆಹಲಿ: ಲಾಕ್​ಡೌನ್ ವೇಳೆ ಜಗತ್ತಿನಾದ್ಯಂತ ಮನುಷ್ಯರ ಸಜ್ಜನಿಕೆ ಬೆಳಕಿಗೆ ಬರುತ್ತಿದೆ. ಇಂಗ್ಲೆಂಡ್​ನ ಟಾಮ್ ಮಾರ್ಸ್ ಎಂಬ ವ್ಯಕ್ತಿ ಎರಡೇ ದಿನಗಳಲ್ಲಿ ಅಕ್ಕಪಕ್ಕದ 80 ಜನರಿಗೆ ಆಗುವಷ್ಟು ಸಾಂಬಾರ್ ತಯಾರಿಸಿ ಹಂಚಿದ್ದಾರೆ.

ಲಾಕ್​ಡೌನ್ ಅವಧಿಯಲ್ಲಿ ಅಕ್ಕಪಕ್ಕದ ಮನೆಯವರಿಗೆ ಏನಾದರೂ ಕೊಡಲು ಬಯಸುತ್ತಿದ್ದ ಟಾಮ್ೆ ಅಡುಗೆ ಮಾಡುವ ರೂಢಿ ಇತ್ತು. ಹೀಗಾಗಿ ಅಡುಗೆ ಸಾಮಗ್ರಿ ತಂದು ರಾತ್ರಿ ಮನೆಯಲ್ಲೇ ಅಡುಗೆ ತಯಾರಿ ಆರಂಭಿಸಿದರು. ಎರಡು ದಿನಗಳಲ್ಲಿ ಅಕ್ಕಪಕ್ಕದ ಇಪ್ಪತ್ತು ಕುಟುಂಬಗಳವರಿಗೆ ಆಗುವಷ್ಟು ಸಾಂಬಾರ್ ತಯಾರಿಸಿದರು.

ಸಸ್ಯಾಹಾರಿಗಳಿಗೆ ಆಲೂಗಡ್ಡೆ-ಸೊಪ್ಪಿನ ಸಾರು; ಮಾಂಸಾಹಾರಿಗಳಿಗೆ ಚಿಕನ್ ಕರಿ ಸಿದ್ಧಪಡಿಸಿದ ಟಾಮ್ ಪತ್ನಿಯ ನೆರವಿನಿಂದ 80 ಪೊಟ್ಟಣಗಳಲ್ಲಿ ಕಟ್ಟಿ ಮಧ್ಯಾಹ್ನದ ವೇಳೆಗೆ ಅಕ್ಕಪಕ್ಕದ ಮನೆಯವರ ಬಾಗಿಲಿನೆದುರು ಇಟ್ಟು ಬಂದರು. ಸಂಜೆಯ ವೇಳೆಗೆ ಟಾಮ್ೆ ಅಕ್ಕಪಕ್ಕದ ಮನೆಯವರೆಲ್ಲ ಅಭಿನಂದನೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net